ಅಯ್ಯೋ ನವಿಲೇ.....

ಬ್ರಹ್ಮಚಾರಿ ನವಿಲು: ಜಡ್ಜ್​ ಉವಾಚ



ಚಿಕ್ಕವರಿದ್ದಾಗ ನವಿಲು ಗರಿ ಮರಿ ಹಾಕಿದ್ಯಾ ಅಂತ ಆಗಾಗ ಪುಸ್ತಕದ ಹಾಳೆಗಳನ್ನು ತಿರುವಿ ಹಾಕುತ್ತಿದ್ದದ್ದು ನೆನೆಪಿದೆ. ನವಿಲು ಗರಿ ಪುಸ್ತಕದಲ್ಲಿದ್ದರೆ ಒಳ್ಳೆ ಮಾರ್ಕ್ಸ್ ಬರುತ್ತೆ ಅಂತ ನಂಬಿದ್ದ ದಿನಗಳವು. ನವಿಲು ಗರಿಗಾಗಿ ಕಿತ್ತಾಡುತ್ತಿದ್ದದ್ದು, ಅಳುತ್ತಿದ್ದದ್ದೂ ಉಂಟು.  ನವಿಲು ಗರಿಗೆ ಹಸಿವಾಗುತ್ತೆ ಅಂತ ಅದಕ್ಕೆ ಪೆನ್ಸಿಲ್ ಶಾರ್ಪ್ ಮಾಡಿ ಇಡ್ತಿದ್ವಿ. ಅದಕ್ಕೆ ಆ ಮರದ ಸಿಪ್ಪೆಗಳೇ ಭಾರೀ ಭೋಜನ ಅಲ್ವಾ.


ಈಗ್ಯಾಕೆ ಈ ನವಿಲು ಗರಿ ನೆನೆಪು ಅಂತೀರಾ.. ಚಿಕ್ಕವರಿಗೇನೊ ಬುದ್ಧಿ ಇಲ್ಲ. ಹಾಗಾಗಿ ನವಿಲು ಗರಿ ಬುಕಿನಲ್ಲಿದ್ರೆ ಮರಿ ಹಾಕುತ್ತೆ ಅಂದ್ಕೊಳ್ತಿದ್ವಿ. ಆದರೆ ಸೆಕ್ಸ್ ಮಾಡದೆಯೇ ಜೀವಿಯೊಂದು ಈ ಜಗತ್ತಲ್ಲಿ ಸೃಷ್ಟಿಯಾಗುತ್ತೆ ಅಂದ್ರೆ ಅದು ಶಾಕಿಂಗ್ ವಿಷ್ಯಾ ಅಲ್ವಾ..? ಆದರೆ ರಾಜಸ್ಥಾನದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ಶರ್ಮಾ ಇಂಥವೊಂದು ಹೇಳಿಕೆಯನ್ನು ನೀಡಿದ್ದಾರೆ.
 


ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಕರೆಯಲು ಕಾರಣ,  ಗಂಡು ನವಿಲು ಬ್ರಹ್ಮಾಚಾರಿ ಪಕ್ಷಿ. ಹೆಣ್ಣು ನವಿಲಿನ ಜೊತೆ ಅದು ಸೆಕ್ಸ್ ಮಾಡೊಲ್ಲ. ಗಂಡು ನವಿಲಿನ ಕಣ್ಣೀರನ್ನು ಹೆಣ್ಣು ನವಿಲು ಕುಡಿಯುವುದರಿಂದ ಗರ್ಭಧಾರಣೆಯಾಗುತ್ತದೆ. ನವಿಲು ಬ್ರಹ್ಮಚಾರಿಯಾಗಿರುವ ಕಾರಣಕ್ಕೆ ಶ್ರೀಕೃಷ್ಣನೂ ತನ್ನ ಮುಡಿಯಲ್ಲಿ ನವಿಲು ಗರಿ ಧರಿಸಿದ್ದಾನೆ ಅಂತ ಶರ್ಮಾ ಹೇಳಿದ್ದಾರೆ. ಶರ್ಮಾ ಪ್ರಕಾರ ನವಿಲು ಬ್ರಹ್ಮಚಾರಿ ಆಗಿರುವುದರಿಂದ ರಾಷ್ಟ್ರೀಯ ಪಕ್ಷವೆಂದು ಘೋಷಿಸಲಾಗಿದೆಯಂತೆ. ಗಂಡು-ಹೆಣ್ಣು ಮಿಲನದ ಸಹಜ ಕ್ರಿಯೆಯಂತೆಯೇ ನವಿಲಿನಲ್ಲೂ ಸಂತಾನೋತ್ಪತ್ತಿ ಆಗುತ್ತದೆ ಎಂದು ವಿಜ್ಞಾನ ಹೇಳುತ್ತೆ. ಆದರೆ, ಲೈಂಗಿಕ ಸಂಭೋಗದಿಂದ ನವಿಲಿನ ಸಂತಾನೋತ್ಪತ್ತಿ ಆಗುವುದಿಲ್ಲ ಅನ್ನೊ ಹೊಸ ವಾದವನ್ನು ಶರ್ಮಾ ಹುಟ್ಟುಹಾಕಿದ್ದಾರೆ.
ಅದ್ಯಾವ ಲೆಕ್ಕಾಚಾರದಲ್ಲಿ ನ್ಯಾಯಮೂರ್ತಿಗಳು ಈ ವಾದವನ್ನು ಹುಟ್ಟು ಹಾಕಿದರೋ ಗೊತ್ತಿಲ್ಲ. ಆದರೆ ಈ ವಾದಕ್ಕೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗಿದ್ದು, ಎಲ್ಲರೂ ಪಕಪಕ ಅಂತ ನಗುತ್ತಿದ್ದಾರೆ. ಅಕಸ್ಮಾತ್ ನವಿಲಿಗೆ ನ್ಯಾಯಮೂರ್ತಿಗಳ ಈ ಹೇಳಿಕೆ ಏನಾದರೂ ಅರ್ಥವಾಗಿದ್ದಿದ್ದರೆ ಒಂದೋ ಶರ್ಮಾ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿತ್ತು ಇಲ್ಲ, ನ್ಯಾಯ ಸಿಗುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವೇನೊ..!



ಸಂಶೋಧಕಿ ಜೆಸ್ಸಿಕಾ
ನವಿಲಿನ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು ಕೂಡ ಶರ್ಮಾ ಅವರ ವಾದ ಕೇಳಿ ಧಂಗಾಗಿದ್ದಾರೆ. ಸಹಾಕಿ ಸಂಶೋಧಕಿ ಜೆಸ್ಸಿಕಾ ಎಂಬುವರು ಕಳೆದ ಹತ್ತು ವರ್ಷಗಳಿಂದ ನವಿಲಿನ ಚಲನವಲನಗಳ ಬಗ್ಗೆ ಸ್ಟಡಿ ಮಾಡ್ತಿದ್ದೀನಿ. ಸಾಮಾನ್ಯವಾಗಿ ಹೆಣ್ಣು ನವಿಲು, ಗಂಡು ನವಿಲಿನ ಕಾಲುಗಳು, ಅದರ ಗರಿಯ ಅಂದ ನೋಡಿ ತನ್ನ ಜೊತೆಗಾರನನ್ನು ಆಯ್ಕೆ ಮಾಡಿಕೊಳ್ಳುತ್ತೆ.  ಗಂಡು ನವಿಲಿನ ಕಣ್ಣೀರೆ ವೀರ್ಯ, ಅದನ್ನು ಕುಡಿದು ಹೆಣ್ಣು ನವಿಲು ಕನ್ಸೀವ್ ಆಗೋದು ಆಶ್ಚರ್ಯದ ಸಂಗತಿ ಅಂತಾರೆ ಜೆಸ್ಸಿಕಾ.


ಅಂತೂ ಇಂತು ನ್ಯಾಯಮೂರ್ತಿ ಶರ್ಮಾ ಅವರು ಏನೂ ಅರಿಯದ ಪುಟಾಣಿಗಳು ನಂಬಿರೋದೆ ಸತ್ಯ, ಸೆಕ್ಸ್ ಮಾಡದೆ ನವಿಲುಗಳು ಮರಿ ಹಾಕುತ್ತವೆ ಅಂತ ತಿಳಿದು ಈ ವಾದವನ್ನು ಮಂಡಿಸಿದ್ದಾರೆ. ಈ ವಾದ ಈಗ ವ್ಯಂಗ್ಯಕ್ಕೆ ಕಾತಣವಾಗಿದೆ. ಆದರೆ ಮುಂದೆಂದೂ ದೇವರು ಅಂತ ಕರೆಯೋ ನ್ಯಾಯಮೂರ್ತಿಗಳು ಈ ಥರಹದ ಅರ್ಥಹೀನ ವಾದವನ್ನು ಮಂಡಿಸದಿದ್ದರೆ ಒಳ್ಳೇದು.

Comments