ಸ್ವಗತ

ನನ್ನ ಹೆಸರು ಮಮತಾ..

ಹಾಸನ ಜಿಲ್ಲೆಯ ವೀರಾಪುರದವಳು.. ಮದುವೆಗೂ ಮುನ್ನ ರಾಶಿ ರಾಶಿ ಕನಸುಗಳೊಂದಿಗೆ ಬದುಕುತ್ತಿದ್ದೆ.. 7 ವರ್ಷದ ಹಿಂದೆ ನನ್ನನ್ನು ಇದೇ ಹಾಸನದ ಬಾಗೇಶಪುರದ ಸುರೇಶ್ ಎಂಬುವರ ಜೊತೆ ಮದುವೆ ಮಾಡಿಕೊಟ್ರು.. ಆಗಷ್ಟೆ ಮದುವೆಯಾಗಿದ್ದ ಸಂತಸದಲ್ಲಿ ನಾನಿದ್ದೆ.. ನನ್ನ ಆಸೆ, ಕನಸುಗಳಿಗೆ ರೆಕ್ಕೆ ಬಂತು ಅಂದ್ಕೊಂಡಿದ್ದೆ.. ಸುರೇಶ್​ ನದ್ದು ಮಧ್ಯಮ ವರ್ಗದ ಕೂಡು ಕುಟುಂಬ.. ಇದ್ದೊಂದು ಪುಟ್ಟ ಮನೆಯಲ್ಲೇ ಮೂವರು ಅಣ್ಣ-ತಮ್ಮಂದಿರೊಂದಿಗೆ ವಾಸವಾಗಿದ್ರು.. ಇದ್ದ ಎರಡು ಎಕರೆ ಜಮೀನು ಸುರೇಶ್ ಕುಟುಂಬಕ್ಕೆ ಆಸರೆಯಾಗಿತ್ತು.. ನಾನೂ ಆ ಮನೆ ಸೇರಿದೆ.. ಒಂದಷ್ಟು ದಿನ ಅದೇ ಮನೆಯಲ್ಲಿ ಜೀವನ ನಡೆಸಿದ್ವಿ.. ಬರಬರುತ್ತಾ ಬದುಕು ದುಸ್ತರವಾಗತೊಡಗಿತು.. ಆಗ ಬೇರೆ ದಾರಿ ಕಾಣದೆ ನನ್ನ ಪತಿಯೊಂದಿಗೆ ಮಾಯಾ ನಗರಿ ಬೆಂಗಳೂರಿಗೆ ಉದ್ಯೋಗ ಅರಸಿ ಬಂದ್ವಿ.. ನೆಲಮಂಗಲದಲ್ಲಿರೋ ಒಂದೇ ಗಾರ್ಮೆಂಟ್ಸ್​ನಲ್ಲಿ ನಾವಿಬ್ರೂ ಕೆಲಸಕ್ಕೂ ಸೇರಿಕೊಂಡ್ವಿ.. ಘಾರ್ಮೆಂಟ್ಸ್​ನಲ್ಲಿ ಒಟ್ಟಿಗೆ ಕೆಲಸ ಮಾಡ್ಕೊಂಡು ಸಂತೋಷವಾಗಿದ್ವಿ.. ನಮ್ಮದು ಪುಟ್ಟದಾದ ಚೊಕ್ಕ ಸಂಸಾರ.. ನಮ್ಮಿಬ್ಬರ ಪ್ರಪಂಚದಲ್ಲಿ ನಾವಿಬ್ರೂ ತುಂಬಾನೆ ಸುಖವಾಗಿ ಬದುಕ್ತಿದ್ವಿ.. ಈ ಹೊತ್ತಿಗೆ ನಮ್ಮೀ ಮುದ್ದು ಕುಟುಂಬಕ್ಕೆ ನಮ್ಮ ಪ್ರೀತಿ ಪ್ರತಿಫಲವಾಗಿ ಪುಟ್ಟ ಕಂದಮ್ಮನೂ ಸೇರಿಕೊಳ್ತು.. ಅವನೇ ನಮ್ಮಿಬ್ಬರ ಮುದ್ದಿನ ಮಗ ಯಶಸ್...                                                         ಹೀಗೆ ಸುಖವಾಗಿದ್ದ ನಮ್ಮ ಸಂಸಾರದಲ್ಲಿ ಸಣ್ಣಪುಟ್ಟ ಜಗಳಗಳು ಪ್ರಾರಂಭವಾಗಿದ್ವು.. ಸಂಸಾರ ಅಂದ್ಮೇಲೆ ಅಲ್ಲಿ ಜಗಳ ಸಹಜ.. ಗಮಡ-ಹೆಂಡಿರ ಜಗಳ ಉಂಡು ಮಲಗೋವರೆಗೂ ಅಂತ ಅಂದ್ಕೊಂಡೆ.. ಈ ಜಗಳ-ಗುದ್ದಾಟಗಳ ಬಗ್ಗೆ ನನ್ನ ತವರು ಮನೆಗೆ ಗೊತ್ತಿರಲಿಲ್ಲ.. ಹಾಗಾಗಿ ಅವ್ರೂ ಕೂಡ ನಾನು ಸುಖವಾಗಿದ್ದೀನಿ ಅಂದ್ಕೊಂಡಿದ್ರು.. ಆದ್ರೆ ಮೊದಮೊದಲು ಸಣ್ಣದಾಗಿ ಆಗ್ತಿದ್ದ ಜಗಳ, ಬರಬರುತ್ತಾ ಜೋರಾಗಲು ಶುರುವಾಯ್ತು.. ಹೀಗೆ ಜಗಳಗಳನ್ನೇ ನೆಪಮಾಡಿಕೊಂಡ ನನ್ನ ಪತಿರಾಯ ಸುರೇಶ್,  ಮನೆಬಿಟ್ಟು ಆಗಾಗ ಮನೆ ಬಿಟ್ಟು ಹೋಗುತ್ತಿದ್ದ.. ಮನಸ್ಸು ಬಂದಾಗ ವಾಪಸ್ಸಾಗುತ್ತಿದ್ದ.. ಆದ್ರೆ ಕಳೆದ 6 ತಿಂಗಳ ಹಿಂದೆ ನನ್ನನ್ನು, ಮಗುವನ್ನು ಬಿಟ್ಟು ಮನೆಯಿಂದ ಹೊರ ನಡೆದವ ಬರಲೇ ಇಲ್ಲ.. ನಾಲ್ಕು ಗೋಡೆ ಮಧ್ಯೆ ಒಬ್ಳೇ ಗಂಟೆಗಟ್ಟಲೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ.. ಸಾಯ್ಬೇಕು ಅಂತಲೂ ಅನಿಸ್ತು.. ಆದ್ರೆ ಎಷ್ಟು ದಿನಾ ಅಂತ ಕಣ್ಣೀರ್​ ಹಾಕ್ಲಿ.. ನಾನ್ ಸತ್ರೆ ನನ್ ಕಂದ ಯಶಸ್ ಜೀವನ ಏನು ಅಂತ ಯೋಚಿಸಲು ಶುರು ಮಾಡಿದೆ.. ಇವತ್ತಲ್ಲ ನಾಳೆ ನನ್ನ ಪತಿರಾಯ ಬಂದೇ ಬರ್ತಾನೆ.. ನನ್ನ ಲೋಕವೇ ಅವನು.. ಅವನಿಗೂ ನಾನ್​ ಬಿಟ್ರೆ ಬೇರೆ ಯಾರಿದಾರೆ ಹೇಳಿ.. ಏಳು ವರ್ಷದಿಂದ ಕಷ್ಟ-ಸುಖ, ನೋವು-ನಲಿವನ್ನ ಹಂಚಿಕೊಂಡು ಬದುಕಿದ್ದೀವಿ.. ಅವನು ಬಂದೇ ಬರ್ತಾನೆ ಅನ್ನೊ ಭರವಸೆಯಲ್ಲಿ ಜೀವಿಸಲು ಶುರು ಮಾಡಿದೆ.. ಕೆಲಸ ಮಾಡಿಕೊಂಡು ನನ್ನ ಮಗ ಯಶಸ್​ನನ್ನು ನೋಡಿಕೊಂಡು ಬದುಕು ಸವೆಸಲು ಶುರು ಮಾಡಿದೆ.. ಸುರೇಶ್ ಬಂದೇ ಬರ್ತಾನೆ ಅಂತ ಕಾಯ್ತಿದ್ದೆ.. ಸುರೇಶ್ ಬರೋ ದಾರಿಯನ್ನೇ ಎದುರು ನೋಡುತ್ತಾ ಆರು ತಿಂಗಳು ಕಾದೆ.. ಅವನು ಬರಲೇ ಇಲ್ಲ.. ಅಮ್ಮನ ಮನೆಗಾದ್ರೂ ಹೋಗಿ ಬರೋಣ ಅಂತ ಮಗನೊಂದಿಗೆ ಹಾಸನದ ವೀರಾಪುರಕ್ಕೆ ಹೋಗಿದ್ದೆ..ಇದೇ ಫೆ. 20 ರಂದು ರಾತ್ರಿ ಹಾಸನದಿಂದ ರಾಜಹಂಸ ಬಸ್​ ಹತ್ತಿ ನನ್ನ ಮಗನೊಂದಿಗೆ ಬೆಂಗಳೂರಿಗೆ ಬರ್ತಿದ್ದೆ.. ವಿಧಿಗೆ ನಾನು ಬದುಕೋದು ಇಷ್ಟ ಇರ್ಲಿಲ್ಲ ಅನ್ಸುತ್ತೆ.. ನನ್ನ ದುರಾದೃಷ್ಟವಶಾತ್ ಯಮ ಕಾಯ್ತಿದ್ದ ಅನ್ಸುತ್ತೆ.. ಬಸ್​ನಲ್ಲಿ ಇದ್ದಕ್ಕಿಂದ್ದಮತೆ ಬೆಂಕಿ ಕಾಣಿಸಿಕೊಂಡಿತು.. ಕ್ಷಣಾರ್ಧದಲ್ಲೇ ಧಗಧಗ ಹೊತ್ತಿ ಉರಿಯಿತು.. ಜೊತೆಗೆ ನಾನು ನನ್ನ ಮಗು ಇನ್ನಿತರರೂ ಕೂಡು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡ್ವಿ.. 
ಒಬ್ಬ ವೃದ್ಧೆ ಪ್ರಾಣವನ್ನೇ ಬಿಟ್ಳು.. ನಾನೋ ಶೇ. 70 ರಷ್ಟು ಸುಟ್ಟು ಕರಕಲಾದೆ.. ಜೊತೆಗೆ 5 ವರ್ಷದ ಮಗ ಯಶಸ್ ಕೂಡ ಬೆಂಕಿಗೆ ತುತ್ತಾದ.. ಕಂದಮ್ಮನಿಗೇನಾಯ್ತೋ  ಎಂದು ಮರುಗುತ್ತಲೇ ನನ್ನ ಗಂಡನನ್ನು ನೋಡುವ ಹಂಬಲ ಹೆಚ್ಚಾಗಿತ್ತು.. ಒಮ್ಮೆ ಅವನನ್ನು ನೋಡಬೇಕೆಂದು ಬಯಸಿದೆ..ಸುರೇಶನಿಗಾಗಿ ನಾಲ್ಕು ದಿನಗಳ ಕಾಲ ಕೈಯಲ್ಲೇ ಜೀವ ಹಿಡಿದು ಕಾಯ್ತಿದ್ದೆ.. ಸಾಯೋ ಮುನ್ನ ಒಮ್ಮೆ ಅವನನ್ನ ನೋಡ್ಬೇಕಿತ್ತು.. ಅವನ ಕನವರಿಕೆಯಲ್ಲೆ ಉಸಿರಾಡ್ತಿದ್ದ ನನ್ನನ್ನು ನೊಡಲು ಕೊನೆಗೂ ಬಂದ.. ಅವನ ಮುಖ ನೋಡುತ್ತಿದ್ದಂತೆಯೇ ಕಣ್ಣಂಚಿನಲ್ಲಿ ನೀರು ತುಂಬಿ ಬಂತು.. ಅವನ ಮಡಿಲಲ್ಲಿ ತಲೆ ಇಟ್ಟ ಕೂಡ್ಲೇ ನನಗಿನ್ನೇನು ಬೇಡ ಅನಿಸ್ತು.. ನನ್ನ ಕಂದ ನನನ್ನು ಅನಾಥ ಮಾಡಿದೆನಾ ಅನ್ನೋ ಪಶ್ಚಾತಾಪವಿದ್ರೂ ಅವನಿಗಾಗಿ ಪರಿತಪಿಸುತ್ತಿದ್ದ ನನ್ನ ಜೀವ ಅಲ್ಲಿಗೆ ಕೊನೆಯಾಯ್ತು.. ನನ್ನ ಬದುಕಿಗೆ ಇತಿ ಶ್ರೀ ಹಾಡೇ ಬಿಟ್ಟೆ..



Comments

Post a Comment