ಅಪ್ಪ ನಿನ್ನವಳೇ ನಾ.

ಅಪ್ಪ ನನ್ನಪ್ಪ... ಬಹಳ ದಿನಗಳಿಂದ ಬರೆಯಬೇಕೆನಿಸಿತ್ತು.. ಅದೇನೋ ಇಂದು ಕಾಲ ಕೂಡಿ ಬಂದಿದೆ.. ಅದೆಷ್ಟೋ ದಿನಗಳಿಂದ ಮನದೊಳಗೆ ಗೂಡು ಕಟ್ಟಿಕೊಂಡಿದ್ದ ಮಾತುಗಳಿಗೆ ಕೆಲವೊಮ್ಮೆ ನೆಪ ಬೇಕಿರುತ್ತೆ..

ಅಂದಿನಿಂದ ಇಂದಿನವರೆಗೆ ರಸ್ತೆ ದಾಟುವಾಗ ನಿನ್ನ ಕಿರುಬೆರಳೇ ನನ್ನ ಕೈಗಾಸರೆ ಅಪ್ಪ.. ಊರೆಲ್ಲಾ ಒಬ್ಬಳೆ ಸುತ್ತಾಡಿ ಅಭ್ಯಾಸವಿದ್ದರೂ ನೀ ಜೊತೆಗಿರುವಾಗ ಮಾತ್ರ ರಸ್ತೆ ದಾಟಲು ನೀ ಬೇಕೆಬೇಕು.. ನೀ ನಿದ್ದಾಗ ಯಾವುದೋ ದಿಕ್ಕಿನಿಂದ ಒತ್ತರಿಸಿ ಬರೊ ಭಯ ದೂರದೂಡಲಾಗದು ನನ್ನಲ್ಲಿ.. ನಿನ್ನ ಬಗ್ಗೆ ಹೇಳದಷ್ಟು ಮಾತುಗಳಿವೆ.. ಆದರೂ ಹೇಳುವ ಮಾತು ಒಂದೇ ಒಂದಿದೆ.. ನಿನ್ನೆಲ್ಲಾ ದುಗುಡ-ದುಮ್ಮಾನ, ತೊಳಲಾಟಕ್ಕೆ ನನ್ನ ಅನುಭವ ಸಾಲುತ್ತಿಲ್ಲ..
ಎಲ್ರಿಗೂ ಪಪ್ಪ ಅಂದ್ರೆ ಪ್ರೀತಿ, ಅಸಡ್ಡೆ, ಎಲ್ಲರ ಅಪ್ಪಂದಿರಿಗೂ ಹಾಡು, ಡ್ಯಾನ್ಸ್, ಸಿಟ್ಟು  ಬರುತ್ತೆ.. ಸಮಯ ಬಂದಾಗ ಅಪ್ಪ ಅಮ್ಮನೂ ಆಗಬಲ್ಲ.. ತಾಳ್ಮೆ ಕಳೆದುಕೊಂಡಾಗ ಸಿಡಿಲಂತೆ ಅಬ್ಬರಿಸಲೂ ಬಲ್ಲ.. ಇದು ಗೊತ್ತಿರೋದಕ್ಕೆ ಗಳಿಗೆಗೊಮ್ಮೆ ನನ್ನ ಅಪ್ಪಂಗೆ ಕೇಳಿದ್ರೆ ಕೊಡಿಸ್ತಾರೆ.. ಯಾರಾದ್ರೂ ಹೆದರಿಸಿದ್ರೆ ನನ್ನಪ್ಪಂಗೆ ಹೇಳ್ತೀನಿ ನೋಡು ಅಂತ ಎಚ್ಚರಿಸ್ತೇವೆ. ಹಾಗೇ ಯಾವುದಾದ್ರೂ ತಪ್ಪು ಮಾಡಿ ಸಿಕ್ಕಿ ಬಿದ್ದಾಗ ಅಪ್ಪನನ್ನ ನೆನೆದು ನಿಂತಲ್ಲೇ ನಡುಗ್ತೀವಿ ಕೂಡ..



ನನ್ನಪ್ಪ ತುಂಬಾ ಮೃದು... ಅವ್ರನ್ನ ಅಮ್ಮ ಒಬ್ಳೆ ಅರ್ಥ ಮಾಡಿಕೊಂಡಿದ್ದು... ಅಮ್ಮ ಅಂದ್ರೆ ಅದೆಷ್ಟೋ ಜನ್ರ ಪಾಲಿಗೆ ಮಮತೆಯ ಆಗರ.
ಅಕ್ಕರೆಯ ಹರಿವು..ಪ್ರೀತಿಯ ಚಿಲುಮೆ. ನನಗೂ ಅಷ್ಟೆ... ಆದ್ರೆ ಬೈದ್ರೂ ಅಪ್ಪ ನನ್ನೊಳ್ಳೆದಕ್ಕೆ ಅಲ್ವಾ ಹೇಳೋದು... ನಾನು ಅದೆಷ್ಟೋ ಸಲ ಅಪ್ಪನಿಗೇನು ಗೊತ್ತು ನನ್ನ ಕನಸು, ಆಸೆಗಳ ಬಗ್ಗೆ ಅಂತ ಅಂದ್ಕೊಂಡಿದೀನಿ... ಆದ್ರೆ ಅದೆಲ್ಲವೂ ಪಪ್ಪನಿಗೆ ಗೊತ್ತಿಲ್ಲದೇ ಇರುತ್ಯೆ..?? ಖಂಡಿತ ಗೊತ್ತಿರುತ್ತೆ... ಬೇಕಂತ್ಲೆ, ನಮ್ಮ ಹುಚ್ಚಾಟಗಳಿಂದ ಮುಂದಾಗೊ ಅನಾಹುತಗಳನ್ನ ತಪ್ಪಿಸೋಕಂತ್ಲೆ ಅಪ್ಪಂದಿರು ಹದಿಹರಯದೆ ಮಕ್ಕಳನ್ನ ಹದ್ದು ಬಸ್ತಿನಲ್ಲಿ ಇಟ್ಕೊಳೋಕೆ ಪ್ರಯತ್ನಿಸ್ತಾರೆ... ಅದು ನಮಗರ್ಥವಾಗದೆ ಅಪ್ಪನನ್ನು ವಿಲನ್ ನಂತೆ ಕಾಣ್ತೀವಿ... ಅಪ್ಪ ಐ ಲವ್ ಯೂ ಪಾ... ನನ್ನ ನೀವ್ ಹೇಗೆ ದೂರ ನಿಂತೇ ಪ್ರೀತಿಸಿದ್ರೋ, ಹಾಗೆ ನಾನೂ ಕೂಡ ದೂರವಿದ್ದುಕೊಂಡೆ ನಿಮ್ಮನ್ನ ತುಂಬಾ ಹಚ್ಕೊಂಡಿದೀನಿ... ನಿಮ್ಮ ಕಿರುಬೆರಳಿಡಿಯಬೇಕೆನಿಸುತ್ತಿದೆ ಮತ್ತೆ.....


ಅಪ್ಪ ನೀ ನಿಟ್ಟ ಕಣ್ಣರನ್ನು ಕಂಡಿದ್ದೇನೇ ಆದರೂ ಅದರಾಳ ಅರಿಯದೆ ಹೋದೆ... ಅಪ್ಪ ನನ್ನ ಪಾಲಿಗೆ ನೀ ಬಿಡಿಸಲಾಗದ ಒಗಟು. ಅರ್ಥವಾದವರಿಗೆ ಕಡಲಾಳದ ಮುತ್ತು..ಲವ್‌ ಯೂ ಸೋ ಮಚ್‌ ಪಪ್ಪ. ಮಿಸ್‌ ಯೂ ಲಾಟ್‌..





Comments