ಸೃಷ್ಠಿಯ ಸೌಂದರ್ಯಕ್ಕೆ ಸಿರಿ ಮುಕುಟ

ಧವಳಕಾಂತಿ...    
Image result for himalaya

   
ಎತ್ತರಕ್ಕೆ ತಲೆಯೆತ್ತಿ ನಿಂತ ಶಿಖರಗಳು. ಕಣ್ಣು ತುಂಬಾ ಪರ್ವತಗಳೇ ಕಾಣುತ್ತವೆ. ಸಾವಿರಾರು ನದಿಗಳ ತವರೂರು. ಧರೆಗೆ ಹರಿದು ಬರುವ ಹಿಮಧಾರೆ. ಕಾಲ್ತೊಳೆವ ಜಲಧಾರೆ. ಇದು ಧರೆಗೆ ಅವತರಿಸಿದ ಸ್ವರ್ಗ ಲೋಕ. ನೋಡಿದಷ್ಟು ನೋಡಬೇಕು ಅನಿಸುತ್ತೆ. ವರ್ಣಿಸಲು ಹೋದ್ರೆ ಶಬ್ದಗಳಿಗೂ ನಿಲುಕದ ಸೌಂದರ್ಯ. ಸುತ್ತ ಕವಿದ ಮಂಜುಗಡ್ಡೆಗಳು. ಮೈ ನಡುಗಿಸುವ ಚಳಿ. ಉಸಿರಿನೊಂದಿಗೆ ಬೆರೆತು ಬರುವ ಮಂಜುಗಾಳಿ. ಥಳಥಳನೆ ಹೊಳೆವ ಬೆಳ್ಳಿ ಶಿಖರಗಳು. ಚಾವಣಿ ಮೇಲಿಂದ ಇಳಿದು ಬಂದ ಹಿಮರಾಶಿ. ಅದೊಂದು ಸುಂದರ ತಾಣ. ಪ್ರಶಾಂತವಾದ ಹಿಮಾವೃತಗೊಂಡ ಪರ್ವತಗಳ ಧವಳಕಾಂತಿ. ಹಿಮವನ್ನೇ ಹೊದ್ದ ಬೆಟ್ಟಗಳು, ಕೊರೆವ ಕಣಿವೆಗಳು. ವರ್ಷ ಪೂರ ಹಿಮಾವೃತವಾಗಿರುವ ಎತ್ತರದ ಪ್ರದೇಶಗಳು. ಅದೇ ಶ್ವೇತಸುಂದರಿ ಹಿಮಾಲಯ’.


    
 ಭೂಮಿಯ ಅತ್ಯಂತ ಸುಂದರ ಪರ್ವತಶ್ರೇಣಿಗಳಲ್ಲಿ ಹಿಮಾಲಯವು ಒಂದು.  ಚೀನಾ, ನೇಪಾಳ, ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಅತಿ ದೊಡ್ಡ ಪರ್ವತ ಹಿಮಾಲಯ. ಭಾರತ ಸೇರಿದಂತೆ ಹಿಮಾಲಯ ದಕ್ಷಿಣ ಭಾಗದ ಹಲವು ರಾಷ್ಟ್ರಗಳು ಕುಡಿವ ನೀರು, ಕೃಷಿ, ಕೈಗಾರಿಕೆ, ವಿದ್ಯುತ್ ಉತ್ಪಾದನೆಗಳಿಗೆ ಇದನ್ನೇ ಅವಲಂಬಿಸಿರುವುದು. ಭಾರತಕ್ಕೆ ಮಾನ್ಸೂನ್ ಮಳೆ ಮಾರುತ ಹೊತ್ತು ತರುವ ಮೋಡಗಳನ್ನು ತಡೆದು ಮುಂಗಾರು ಮಳೆ ಸುರಿಸುವ ಮಹತ್ಕಾರ್ಯವನ್ನು ಹಿಮಾಲಯವೇ ನಿರ್ವಹಿಸುತ್ತದೆ. ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡ ಹದಿನೇಳರಷ್ಟು ಮನುಷ್ಯರು ಹಿಮಾಲಯದ ನೀರನ್ನೇ ಆಶ್ರಯಿಸಿದ್ದಾರೆ. 
Related image


         ಭಾರತ ಉಪಖಂಡದ ಉತ್ತರದಂಚಿನ ಉದ್ದಕ್ಕೂ ಹರಡಿದೆ ಈ ಹಿಮಾಲಯ. ಇದು ಎರಡು ಸಾವಿರದ ನಾನೂರು ಕಿ.ಮೀ ಉದ್ದವಿದೆ.. ಈ ಪರ್ವತದ ಹಿಮ ಉಪಗ್ರಹ ಚಿತ್ರದಲ್ಲು ಕಾಣುತ್ತೆ. ಸಮುದ್ರ ಮಟ್ಟದಿಂದ 18,000 ಅಡಿ ಎತ್ತರವಿದೆ. ಇಷ್ಟು ಎತ್ತರದ ಭೂ ಪ್ರದೇಶ ಈ ಧರೆಯಲ್ಲೆ ಮತ್ತೊಂದಿಲ್ಲ. ಇನ್ನು 20,000 ಅಡಿಗೂ ಅಧಿಕ ಎತ್ತರದ ಐನೂರು ಶಿಖರಗಳು, 24,000 ಅಡಿ ಮೀರಿದ 84 ಶಿಖರುಗಳನ್ನು ಹಿಮಾಲಯದಲ್ಲಿ ನೋಡಬಹುದು. ವಿಶ್ವದ ಮೊದಲ ಹತ್ತು ಅತ್ಯೂನ್ನತ ಪರ್ವತದ ಶಿಖರಗಳ ಪೈಕಿ 9 ಶಿಖರಗಳನ್ನು ಹಿಮಾಲಯದಲ್ಲೆ ಕಾಣಬಹುದು. ಹಿಮಾಲಯದಲ್ಲಿ ಒಟ್ಟು 32,540 ಹಿಮ ನದಿಗಳಿವೆ. ಇದರ ಒಟ್ಟು ವಿಸ್ತಾರ 77310 ಚದರ ಕಿಲೋ ಮೀಟರ್. ಅನೇಕ ಹಿಮನದಿಗಳ ಮತ್ತು ನದಿಗಳ ತವರೂರು ಆಗಿದೆ ಹಿಮಾಲಯ ಪ್ರದೇಶ. ಸಿಂಧೂ, ಗಂಗಾ, ಅಲಕಂದಾ, ಯಮುನಾ, ಬ್ರಹ್ಮಪುತ್ರ ನದಿಗಳು ಹುಟ್ಟುವುದು ಸಹ ಹಿಮಾಲಯದಲ್ಲೆ. ಹಿಮಾಲಯ ಶ್ರೇಣಿಯಲ್ಲಿ ಅನೇಕ ಹಿಮನದಿಗಳೂ ಇವೆ. ಗಂಗೋತ್ರಿ, ಯಮೂನೋತ್ರಿ, ನುಬ್ರಾ, ಖುಂಬು ಹಿಮನದಿಗಳನ್ನು ಇಲ್ಲಿ ಕಾಣಬಹುದು. ಸಿಯಾಚಿನ್ ಎಂಬ ಅತಿದೊಡ್ಡ ನದಿ ಇರುವುದು ಸಹ ಹಿಮಾಲಯದಲ್ಲೆ.

                       ವಿವಿಧ ರೀತಿಯ, ಅನ್ಯ ದೇಶದ ಪ್ರವಾಸಿಗರನ್ನು ಸೆಳೆಯುತ್ತಿದೆ ಹಿಮಾಲಯ ಪರ್ವತ. ಸಾಧಕರಿಗೂ, ಧಾರ್ಮಿಕರಿಗೂ ಸಹ ಇದು ಸುಂದರ ತಾಣ.. ಬೆಟ್ಟ ಹತ್ತುವುದು, ಜೋರ್ಬಿಂಗ್, ಸ್ಕೀಯಿಂಗ್‍ನಂತ ಹಲವು ಸಾಹಸಕ್ಕೆ ಅವಕಾಶಗಳೂ ಇಲ್ಲಿವೆ. ಈ ಪರ್ವತವೇರಿ ಸಾಧನೆ ಗೈದ ವ್ಯಕ್ತಿಗಳೂ ಇದ್ದಾರೆ. ಶಿಖರವೇರಿ ತುದಿಯಿಂದ ಭೂಪ್ರದೇಶ, ಬೆಟ್ಟ-ಗುಡ್ಡಗಳು, ನೋಡಲು ಬಲು ಆಕರ್ಷಕ. ಭಾರತದಲ್ಲಿ ಪ್ರಕೃತಿಗೆ ಮತ್ತು ಆಧ್ಯಾತ್ಮಕ್ಕೆ ಇರುವಷ್ಟು ನೆಲೆ ಬೇರೆಲ್ಲೂ ಇಲ್ಲ. ಇಲ್ಲಿ ಅನಾದಿ ಕಾಲದಿಂದ ಋಷಿ-ಮುನಿಗಳು ವಾಸಿಸಿ ತಪವನ್ನಾಚಿರಿಸಿದ್ದಾರೆ.. ಇದು ದೈವಭಕ್ತರ ಪುಣ್ಯ ಕ್ಷೇತ್ರ. ಇನ್ನು ಬೆಟ್ಟವೇರುವ ಸಾಹಸಿಗರಿಗೆ ಮೆಚ್ಚಿನ ತಾಣ. ಈ ಸ್ಥಳವನ್ನು ಜನಪ್ರಿಯವಾಗಿಸಿದ್ದು ನಿಸರ್ಗದತ್ತ ಸೌಂದರ್ಯವೇ. ವಿಶೇಷ ಗಮನ ಸೆಳೆವ ಆಕರ್ಷಕ ಮತ್ತು ರಮಣೀಯ ತಾಣಗಳು ಇಲ್ಲಿವೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನ ಮಾನಸದಲ್ಲಿ ಮಹತ್ವದ ಪಾತ್ರ ಕಾಯ್ದುಕೊಂಡಿದೆ ಹಿಮಾಲಯ. ಹಿಮಾಲಯವು ಭಾರತೀಯರಿಗೆ ಧಾರ್ಮಿಕ ಸ್ಥಳವೂ ಹೌದು. ಭೌದ್ಧ ಮತ್ತು ಹಿಂದೂ ಧರ್ಮದವರು ಈ ಪ್ರದೇಶಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಹಿಮಾಲಯದಲ್ಲಿ ಕೇದಾರ ನಾಥ, ಬದರೀನಾಥ, ಹರಿದ್ವಾರ, ಗೋಮುಖ್, ಹೃಷಿಕೇಶ, ಕೈಲಾಸ ಪರ್ವತ, ಮಾನಸ ಸರೋವರ ಮುಂತಾದ ಪವಿತ್ರ ಕ್ಷೇತ್ರಗಳಿವೆ. ಇಷ್ಟೇ ಅಲ್ಲದೆ ಇನ್ನು ಸಾಕಷ್ಟು ಧಾರ್ಮಿಕ ಪ್ರದೇಶಗಳಿವೆ. 
Image result for himalaya


                  ಈ ಹಿಮಾಲಯ ತನ್ನ ಗರ್ಭದೊಳಗೆ ರೌದ್ರತೆಯನ್ನು ಇರಿಸಿಕೊಂಡಿದ್ದಾಳೆ. ಭೂಮಿಯ ಕೆಳ ಪದರ ಚಲಿಸಿದಾಗ ಭೂಮಿ ಕಂಪಿಸುತ್ತದೆ. ಈ ಭೂಕಂಪದಿಂದಾಗಿ ಇಲ್ಲಿರುವ ಜನರು ಜೀವ ಕಳೆದುಕೊಳುತ್ತಾರೆ.  ಭೂಮಿ ಬಿರುಕು ಬಿಟ್ಟಂತೆ ಜನರ ಬದುಕು ಛಿದ್ರಛಿದ್ರವಾಗುತ್ತವೆ. ಭೂಕಂಪನದಿಂದಾಗಿ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಭೂಕಂಪ ಸಂಭವಿಸೋದು ಹೊಸದೇನು ಅಲ್ಲ. ಇದೇ ವರ್ಷದಲ್ಲಿ  ಎರಡು ಸಲ ಭೂಕಂಪವಾಗಿದೆ.  ಮೇ ತಿಂಗಳಲ್ಲಿ ಭೂಕಂಪ ಸಂಭವಿಸಿದಾಗ 121 ಮಂದಿಯನ್ನು ನಿಸರ್ಗ ಬಲಿ ತೆಗೆದುಕೊಂಡಿದೆ. ಆಗ ನೇಪಾಳ, ಉತ್ತರ ಭಾರತ ಮತ್ತು ಈಶಾನ್ಯ 
ಭಾರತದಲ್ಲಿ ಭೂಮಿ ಕಂಪಿಸಿತ್ತು. ಇನ್ನು ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಸಹ ಭೂ ಕುಸಿತ ಸಂಭವಿಸಿತ್ತು.. ಆಗ ನೇಪಾಳ, ಉತ್ತರ ಭಾರತ, ಈಶಾನ್ಯ ಭಾರತ ಮತ್ತು ಗುಜರಾತ್‍ನಲ್ಲಿ ಒಟ್ಟು 8,900 ಮಂದಿ ಮೃತಪಟ್ಟಿದ್ದರು. ನೇಪಾಳದಲ್ಲಿ ನಡೆದ ಭೂಕಂಪವನ್ನು ನೆನೆಸಿಕೊಂಡ್ರೆ ಈಗಲು ಎದೆ ನಡುಗುತ್ತೆ. ಈ ಭೂಕುಸಿತದಿಂದ ನೇಪಾಳದ ಜನರು ಇಂದಿಗೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಭೂಕಂಪನದಿಂದಾಗಿ ನೇಪಾಳದಲ್ಲಿದ್ದ ಹಲವು ದೇವಾಲಯಗಳು ಹಾನಿಯಾಗಿವೆ.. ಇಲ್ಲಿಯ ಜನರ ಜೀವನ ಅಸ್ಥವ್ಯಾಸ್ಥವಾಗಿದೆ. ನೇಪಾಳವೊಂದು ಧಾರ್ಮಿಕ ಸ್ಥಳವಾಗಿದಿದ್ದರಿಂದ ಇಲ್ಲಿಗೆ ಪ್ರವಾಸಿಗರ ಮಹಾಸಾಗರವೇ ಹರಿದು ಬರುತಿತ್ತು. ಈ ಪ್ರವಾಸಿಗರಿಂದಲೇ ನೇಪಾಳ ಸರ್ಕಾರಕ್ಕೆ ಸಾಕಷ್ಟು ಆದಾಯವೂ ಸಿಗುತಿತ್ತು. ಆದ್ರೆ ಭೂಕಂಪವಾದಾಗಲಿರುವುದರಿಂದ ನೇಪಾಳ ಆರ್ಥಿಕ ಸಂಕಷ್ಟದಲ್ಲಿದೆ.   
Related image


            ಇನ್ನು 2011 ರ ಸೆಪ್ಟೆಂಬರ್‍ನಲ್ಲಿ ಈಶಾನ್ಯ ಭಾರತ, ದೆಹಲಿ, ಕೋಲ್ಕತಾ, ಲಖನೌ ಮತ್ತು ಜೈಪುರ ಪ್ರದೇಶಗಳಲ್ಲಿ ಭೂಮಿ ಬಿರುಕು ಬಿಟ್ಟು, 118 ಜನ ಭೂಕಂಪಕ್ಕೆ ಬಲಿಯಾಗಿದ್ರು.. ಇನ್ನು ಇಸ್ಲಾಮಬಾದ್, ಶ್ರೀನಗರ ಕಾಂಗ್ರಾ, ಜಮ್ಮು – ಕಾಶ್ಮೀರದಲ್ಲಿ 2005ರ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ ಭೂಕಂಪಕ್ಕೆ ಸುಮಾರು ಒಂದು ಲಕ್ಷದ 30 ಸಾವಿರ ಮಂದಿ ಮೃತಪಟ್ಟಿದ್ದರು. 2004ರ ಡಿಸೆಂಬರ್ 26 ರಂದು ನಡೆದ ಭೂಕಂಪ ಒಂದು ರೋಚಕ ಘಟನೆ. ಬರೋಬ್ಬರಿ ಎರಡು ಲಕ್ಷದ ಎಂಬತ್ತ ಮೂರು ಸಾವಿರದ ನೂರ ಆರು ಜನರು ಮೃತಪಟ್ಟಿದ್ದರು.. ಭಾರತದಲ್ಲಿ ಸುನಾಮಿಗೆ ಹದಿನೈದು ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. ಶ್ರೀಲಂಕಾ ಮತ್ತು ಮಾಲ್ಡೀವ್ಸ್‍ನಲ್ಲಿ ಭೂ ಕುಸಿತ್ತಕ್ಕೆ ಜನ ಬಲಿಯಾಗಿದ್ರು.. ಕಛ್‍ನಲ್ಲಿ ನಡೆದ ಭೀಕರ ಭೂಕಂಪಕ್ಕೆ ಇಪ್ಪತ್ತು ಸಾವಿರ ಮಂದಿ ಮೃತ ಪಟ್ಟಿದ್ದರು. ಇವೆಲ್ಲಾ ಭಾರತದಲ್ಲಿ ನಡೆದ ಭಾರಿ ಭೂಕಂಪಗಳು. ಇಷ್ಟೆಲ್ಲಾ ಜನರು ಭೂಕಂಪಕ್ಕೆ ಬಲಿಯಾಗಿದ್ದಾರೆ.

            ಭೂಮಿ ಅದೆಷ್ಟು ಬೆಂಕಿಯನ್ನು ತನ್ನ ಗರ್ಭದೊಳಗೆ ಇಟ್ಟುಕೊಂಡಿದೆ ಅಂದ್ರೆ ಅದು ಆಗಾಗ ಜ್ವಾಲಾಮುಖಿಯಾಗಿ ಸಿಡಿಯುತ್ತಲೆ ಇರುತ್ತದೆ. ಇದು ಸಹ ಒಂದು ರೀತಿಯ ವಿಕಾಸ. ಭೂಮಿಯ ಕೆಳ ಪದರಗಳ ಘರ್ಷಣೆಯಾದಾಗ ಭೂಮಿ ಕಂಪಿಸುತ್ತದೆ. ಹಿಮಲಯದ ತಾಪಮಾನ ಹೆಚ್ಚಾದಾಗಲೆಲ್ಲ ಭೂಕಂಪವಾಗುತ್ತದೆ. ಹಿಮಾಲಯದ ಹುಟ್ಟಿದ್ದು ಹೇಗೆ ಅಂತ ನಿಮಿಗೊತ್ತಾ ?  ಇಷ್ಟು ಸುಂದರವಾಗಿ ಕಾಣುವ ಹಿಮಾಲಯ ಪರ್ವತ ನಿರ್ಮಾಣವಾಗೋಕೆ ಕೋಟಿ ಕೋಟಿ ವರ್ಷಗಳೆ ಕಳೆದಿವೆ. ಅದು ಸುಮಾರು 70 ಲಕ್ಷ ಕೋಟಿ ವರ್ಷಗಳ ಹಿಂದೆ ಒಂದು ಮಹಾ ಸರೋವರವಿತ್ತು. ಅದರ ಹೆಸರು ಟೆತಿಸ್ ಸಾಗರ. ಇಗ ಅದು ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಹಿಂದೆ ಇದ್ದ ಈ ಟೆತಿಸ್ ಸಾಗರವೇ ಇಂದಿನ ಭಾರತ ಪ್ರದೇಶ.


                   ಮೊದಲು ಖಂಡಗಳು ಒಂದೇ ಆಗಿದ್ವು. ಆದ್ರೆ ಕಾಲಂತರದಲ್ಲಿ ಈ ಖಂಡಗಳು ಬೇರ್ಪಟವ್ಟು. ಅದಕ್ಕೆ ಕಾರಣ ಭೂಮಿ ಒಳ ಪದರದ ಚಲನೆ. ಸಾಗರದ ತಳದಲ್ಲಿ ಶಿಲಾರಸ ಚಲಿಸುತ್ತಲೆ ಇರುತ್ತೆ. ಖಂಡಗಳ ಚಲನೆ ನಿರಂತರವಾಗಿ ಅನೇಕ ವರ್ಷಗಳ ಕಾಲ ನಡೆದಿದೆ. ಈ ಖಂಡಗಳು ಒಂದಕ್ಕೊಂದು ಡಿಕ್ಕಿ ಒಡೆದಾಗ ಭೂಮಿ ಕಂಪಿಸುತ್ತದೆ. ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸಿದ್ದು ಹಿಮಾಲಯ ಪರ್ವತವೆ. ಸುಮಾರು ಕೋಟಿ ವರ್ಷಗಳ ಹಿಂದೆ “ ಪ್ಯಾಂಜಿಯ” ಭೂ ಭಾಗ ಚೂರಾದಾಗ ಇಂಡೋ-ಆಸ್ಟ್ರೇಲಿಯನ್ ಯೂರೋಪಿಯನ್ ಕಡೆಗೆ ತೇಲಲು ಆರಂಭಿಸಿತು. ಒಮ್ಮೆ ಇವೆರಡು ಭೂಭಾಗಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿತು. ಆಗ ಈ ಭೂಭಾಗಗಳ ಚಲನೆ ಆರಂಭಗೊಂಡಿತು.  ಸರೋವರವಾಗಿದ್ದ ಜಾಗ ನಿಧಾನವಾಗಿ ಮೃದು ಕಲ್ಲುಗಳಾಗಿ ರೂಪುಗೊಂಡವು. ಆ ಕಲ್ಲುಗಳು ಕಾಲಂತರದಲ್ಲಿ ಘನ ರೂಪಕ್ಕೆ ಬದಲಾಯಿತು. ನಂತರ ಈ ಕಲ್ಲುಗಳು ಸಣ್ಣ ಗುಡ್ಡವಾಗಿ ಬೆಳೆದವು. ಈ ಗುಡ್ಡಗಳು ನಿಧಾನವಾಗಿ ಬೆಟ್ಟಗಳಾಗಿ ಬೆಳೆಯಲು ಪ್ರಾರಂಭಿಸಿತು.. ಈ ಪರ್ವತಗಳಲ್ಲಿ ತಾಪಮಾನ ತಗ್ಗಲು ಶುರುವಾಯ್ತು. ಈ ಶಿಖರದ ತುಂಬಾ ಹಿಮ ಆವರಿಸಿಕೊಂಡಿತು. ಅದೇ ಇಂದಿನ ಹಿಮಾಲಯ. ಕೋಟ್ಯಾಂತರ ವರ್ಷಗಳ ನಿರಂತರ ವಿಕಾಸದಿಂದ ಹಿಮಾಲಯದ ಸೃಷ್ಟಿಯಾಗಿದೆ. ಪರ್ವತದ ರಚನೆಗೆ ಖಂಡಗಳ ಘರ್óಣೆಯೆ ಪ್ರಮುಖ ಕಾರಣ. ಆದ್ರೆ ಭೂಮಿ ತನ್ನ ಚಲನೆಯನ್ನು ಇನ್ನು ನಿಲ್ಲಿಸಿಲ್ಲ. ಇಂದಿಗೂ ನಿಧಾನವಾಗಿ ಇಂಡೋ-ಆಸ್ಟ್ರೇಲಿಯಾ ಭೂಭಾಗ ಚಲಿಸುತ್ತಿದೆ. ಟಿಬೆಟ್ ಭೂ ಅಡಿಯಲ್ಲಿ ಸುಮಾರು ವರ್ಷಕ್ಕೆ ಎರಡು ಸೆಂಟಿಮೀಟರ್‍ನಷ್ಟು ಚಲಿಸುತ್ತದೆ. ಇದರಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಂಟೀಮೀಟರ್ ಬೆಳೆಯುತ್ತದೆ. ಈ ಚಲನೆಯಿಂದ ಈ ಪ್ರದೇಶಗಳಲ್ಲಿ ಆಗಾಗ ಭೂಮಿ ಕಂಪಿಸುತ್ತದೆ. 
Image result for himalaya

                      ಪ್ರಕೃತಿ ಇವತ್ತಿದ್ದಂತೆ ನಾಳೆ ಇರುವುದಿಲ್ಲ. ಕೋಟ್ಯಾಂತರ ವರ್ಷಗಳಿಂದ ಪ್ರಕೃತಿ ಬದಲಾಗುತ್ತಲೇ ಇದೆ. ಭೂಮಿಯ ಪದರ ಯಾವಾಗಲೂ ಚಲಿಸುತ್ತಿರುತ್ತೆ.  ಕೋಟಿ ಕೋಟಿ ವರ್ಷಗಳ ಹಿಂದೆ ಸರೋವರವಾಗಿದ್ದ ಪ್ರದೇಶ ಈಗ ಪರ್ವವತವಾಗಿ ನಿರ್ಮಾಣವಾಗಿದೆ. ಮುಂದೊಂದು ದಿನ ಈ ಪರ್ವತವೂ ಮತ್ತೆ ಸಾಗರವಾಗಿ ಬದಲಾಗುವ ಸಾಧ್ಯತೆ ಇದೆ. ಈ ಬದಲಾವಣೆಗಳಿಗೆ ಪ್ರಕೃತಿ ಮತ್ತಷ್ಟು ಕೋಟಿ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈಗ ಹಿಮಾಲಯದ ಬಂಡೆಗಳು ಕರಗಲಾರಂಭಿಸಿವೆ. ಈಗಾಗಲೇ ಕರಗುತ್ತಿರುವ ಹಿಮಾಲಯ ಮತ್ತೆ ಸರೋವರವಾಗಿ ಬದಲಾಗುತ್ತೆ. ಆದ್ರೆ ಅದಕ್ಕೆ ಇನ್ನು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಹೀಗಾಗಿ ಹಿಮಾಲಯ ನಿರ್ಮಾಣವಾಗೋಕೆ ಕೋಟಿ ವರ್ಷಗಳನ್ನ ತೆಗೆದುಕೊಂಡಿದೆ. ಪ್ರಕೃತಿ ಸೃಷ್ಟಿಯ ಬೆರಗುಗಳನ್ನೊಳಗೊಂಡ ಶಕ್ತಿಯಂತಿದೆ.

Comments