ನಿಮ್ಮ ನಿದ್ರೆ, ನಿಮ್ಮ ಆರೋಗ್ಯ

ನಿಮ್ಮ ನಿದ್ರೆ, ನಿಮ್ಮ ಆರೋಗ್ಯ

ಭಾಗ - 1



ಪ್ರತಿಯೊಬ್ಬ ಮನುಷ್ಯನಿಗೆ ಗಾಳಿ, ನಿದ್ದೆ, ನೀರು, ಆಹಾರ ಅತ್ಯವಶ್ಯಕ. ಇವುಗಳಲ್ಲಿ ಒಂದಿಲ್ಲ ಎಂದರೂ ಬದುಕಲಾರ ; ಒಂದರಲ್ಲಿ ವ್ಯತ್ಯಾಸವಾದರೂ  ಅವನ ಆರೋಗ್ಯ ಕೆಡುತ್ತದೆ. ಇನ್ನು ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ಇಡೀ ದಿನ ದುಡಿದು ದಣಿದ ದೇಹ, ಮನಸ್ಸನ್ನು ಬಾಚಿ ತಬ್ಬಿ ಮತ್ತೆ ದುಡಿಯುವ ಚೈತನ್ಯ ತುಂಬುತ್ತಾಳೆ ನಿದ್ರಾದೇವಿ. 10 ನಿಮಿಷ ಜೋಂಪು ನಿದ್ದೆ ಮಾಡಿದ್ರೆ ಸಾಕು ಹತ್ತು ಗಂಟೆಗೆ ಸಾಕಾಗುವ ಚೈತನ್ಯವಿರುತ್ತೆ. ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ನಿದ್ದೆಬೇಕೇ ಬೇಕು. ನಿದ್ದೆಗೆಡುವುದರಿಂದ ದೈಹಿಕ ಮತ್ತು ಮಾನಸಿಕ ತೊಂದರೆಗಳಾಗುತ್ತೆ. ಇದು ಎಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯ ಮಿನಿಮಮ್ 5 ತೀಸು ನಿದ್ರೆ ಮಾಡಲೇ ಬೇಕು. ಇಲ್ಲದಿದ್ದರೇ ನಿದ್ರಾ ಹೀನತೆಯಿಂದ ರೋಗಗಳು ಬರುವುವು.

ಈಗಂತೂ ಬಿಡಿ ಬೆಳಗೆದ್ದಾಗ ಟೆಂಷನ್, ವರೀಸ್ ಶುರುವಾದ್ರೆ ರಾತ್ರಿ ದಿಂಬಿಗೆ ತಲೆಕೊಟ್ರೂ ಕಮ್ಮಿ ಆಗಿರೊಲ್ಲ… ಅಲ್ಟು ಒತ್ತಡದಲ್ಲಿ ಜನ ಬದುಕುತಿದ್ದಾರೆ. ಯಾವ ಯಾವ ವಯಸ್ಸಿಗೆ ಎಷ್ಟು ಹೊತ್ತು ಮಲಗಬೇಕೋ ಅಷ್ಟೋತ್ತು ಮಲಗಿದ್ರೆ ಆರೋಗ್ಯಾನೂ ಚೆನ್ನಾಗಿರುತ್ತೆ..


ಹಾಗೆ ನೋಡೋಕೋದ್ರೆ ನವಜಾತ ಶಿಶು ಮೂರು ತಿಂಗಳವರೆಗೂ ದಿನಕ್ಕೆ 14 ರಿಂದ 17 ಗಂಟೆ ಕಾಲ ನಿದ್ದೆ ಮಾಡಬೇಕು.. 4 ತಿಂಗಳಿಂದ 11 ತಿಂಗಳವರೆಗೆ ಮಗು 12 ರಿಂದ 15 ಗಂಟೆಗಳು ನಿದ್ರಿಸಬೇಕು. 1 ದಿಂದ 2 ವರ್ಷದ ಒಳಗಿನ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಂತರ 3 ರಿಂದ 5 ವರ್ಷದೊಳಗಿನ ಮಕ್ಕಳು 10 ರಿಂದ 13 ಗಂಟೆ ಕಾಲ ನಿದ್ರಿಸುವುದು ಸೂಕ್ತ. 6 ವರ್ಷದ ಮಕ್ಕಳು 13 ವಯಸ್ಸಿನವರೆಗೂ 9 ರಿಂದ 11 ಗಂಟೆ ನಿದ್ದೆ ಮಾಡುವುದು ಉತ್ತಮ. 14 ರಿಂದ 17 ವರ್ಷದ ಮಕ್ಕಳು ದಿನಕ್ಕೆ ಕನಿಷ್ಠ ಎಂದರು 8 ರಿಂದ 10 ಗಂಟೆಗಳ ಕಾಲ ನಿದ್ದೆ ಮಾಡುವಂತೆ ನೋಡಿಕೊಳ್ಳಬೇಕು. 18 ರಿಂದ 25 ವರ್ಷದ ಯುವಕರು 7 ರಿಂದ 9 ಗಂಟೆಗಳ ಸಮಯ ನಿದ್ದೆ ಮಾಡಬೇಕಾಗುತ್ತೆ. 26 ರಿಂದ 64 ವರ್ಷ ವಯಸ್ಸಿನವರು 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡುವುದು ಉತ್ತಮ. ಇನ್ನು 65 ವರ್ಷ ಮೆಲ್ಪಟ್ಟವರು ದಿನಕ್ಕೆ 7 ರಿಂದ 8 ಗಂಟೆ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳಯದು ಎನ್ನುತ್ತಾರೆ ತಜ್ಞರು.

ಮೇಲೆ ಹೇಳಿರುವಂತೆ ಮನುಷ್ಯ ನಿದ್ರಿಸಿದರೆ ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ಆರೋಗ್ಯದಿಂದ ಜೀವಿಸುತ್ತಾನೆ. ಹೆಚ್ಚು ಇಲ್ಲವೆ ಕಡಿಮೆ ನಿದ್ದೆ ಮಾಡುವುದು ಅಪಾಯಕಾರಿ ಮತ್ತು ರೋಗಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತೆ. ಮನುಷ್ಯ 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಿದವರು ಮತ್ತು 4 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡಿದವರಲ್ಲಿ ಸಾವಿನ ಸಂಖ್ಯೆ ಅಧಿಕವಿದೆ. 5 ಅಥವಾ ಅದಕ್ಕಿಂತ ಹೆಚ್ಚು ನಿದ್ದೆ ಮಾಡಿದವರು 8 ಗಂಟೆ ಮೀರಿ ನಿದ್ದೆ ಮಾಡಿದವರಿಗಿಂತ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಅಲ್ಲದೆ 7 ಗಂಟೆ ನಿದ್ದೆ ಮಾಡಿದವರು ಧೀರ್ಘ ಕಾಲ ಜೀವಿಸಿದ್ದಾರೆ ಎನ್ನುತ್ತೆ ಸಂಶೋಧನೆ.

ಸೋ, ಎಲ್ಲರೂ ಅವರವರ ಸಮಸ್ಯೆಗಳನ್ನು ಬದಿಗೊತ್ತಿ ನೆಮ್ಮದಿಯಾಗಿ ನಿದ್ದೆ ಮಾಡುವುದು ಒಳ್ಳೆಯದು.. ಇಲ್ಲವಾದಲ್ಲಿ ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರರಾಗುತ್ತೀರಿ.. ಅತೀ ಹೆಚ್ಚು ಯೋಚನೆ ಮಾಡೋರಿಗೂ ನಿದ್ಕೆ ಕಡಿಮೆ.. ಅಂಥವರು ತಲೆಲಿರೋದನ್ನೆಲ್ಲ ಬರೆದರೆ ಕೊಂಚ ರಿಲ್ಯಾಕ್ಸ್ ಆಗ್ತಾರೆ.. ದನವಿಡೀ ಅಲ್ಲದಿದ್ರೂ ಹೆಚ್ಚು ಖಷಿಯಾಗಿ ಇರೋರು ಸ್ವಲ್ಪ ಕಡಿಮೆ ನಿದ್ರೆ ಮಾಡಿದ್ರೂ ತೊಂದರೆ ಇಲ್ಲ.. 

Comments