ಪೋಷಕರೇ ಹುಷಾರ್..!

ಬಿ ಕೇರ್ ಫುಲ್; ನೀಲಿ ತಿಮಿಂಗಿಲ ಭೂತ ಬಂದಿದೆ..!



ಮಕ್ಕಳಿಗೆ ಪಾಠಕ್ಕಿಂತಲೂ ಆಟವೇ ಹೆಚ್ಚು ಇಷ್ಟವಾಗುತ್ತೆ. ಹಿಂದೆಲ್ಲಾ ಮಕ್ಕಳು ಆಟ ಅಂದ್ರೆ ಮೈದಾನಗಳಲ್ಲಿ ಗಿಲ್ಲಿ ದಾಂಡು, ಕಬ್ಬಡ್ಡಿ, ಜೂಟಾಟ ಗೇಮ್ಸ್ ಗಳನ್ನು ಆಡುತ್ತಿದ್ದರು. ಆದರೆ ಇವತ್ತಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್, ಕಂಪ್ಯೂಟರ್. ದಿನಪೂರ್ತಿ ಆನ್‍ಲೈನ್ ಗೇಮ್‍ಗಳಲ್ಲಿ ಮುಳುಗಿರುತ್ತಾರೆ.

ಕಡಿಮೆ ಬೆಲೆಯಲ್ಲಿ ಸಿಗುವ ಆಂಡ್ರ್ಯಾಯ್ಡ್  ಫೋನ್‍ಗಳು ಮಕ್ಕಳಿಗೆ ಸಿಗುತ್ತಿದೆ.  ಆಂಡ್ರ್ಯಾಯ್ಡ್ ಮೊಬೈಲ್ ಗಳಲ್ಲಿ ಸಾಕಷ್ಟು ಆನ್ ಲೈನ್ ಗೇಮ್ ಗಳು ಸುಲಭವಾಗಿ ಸಿಗುವಂತೆ ಮಾಡುತ್ತಿದೆ. ಇದು ಮಕ್ಕಳ ಬೌದ್ಧಿಕ ಗುಣಮಟ್ಟ, ಆರೋಗ್ಯ, ಪಠ್ಯದ ಬಗೆಗಿನ ಆಸಕ್ತಿ ಎಲ್ಲದರ ಮೇಲೂ ಪ್ರಭಾವ ಬೀರುತ್ತಿದೆ. ಕ್ಯಾಂಡಿಕ್ರಶ್, ಹೇ ಡೇ, ಕಿಂಗ್ ಡಮ್ ರಶ್, ಸ್ಟ್ರಾಟಜೀ ಗೇಮ್, ಟೆಂಪಲ್‍ರನ್, ಬಬಲ್ ಗೇಮ್, ಹೀಗೆ ಎಲ್ಲವೂ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ. ಆದರೆ ಈ ಗೇಮ್‍ಗಳನ್ನು ಬಿಟ್ಟು ಮಕ್ಕಳು ಡೆಡ್ಲೀ ಗೇಮ್‍ಗಳತ್ತ ಹೆಚ್ಚು ವಾಲುತ್ತಿದ್ದಾರೆ.


ಅ ಸೈಲೆಂಟ್ ಹೌಸ್, ವೇಕ್ ಮೀ ಅಪ್, ಬ್ಲ್ಯೂ ವೇಲ್ ಹತ್ತು ಹಲವು ಡೆಡ್ಲಿ ಗೇಮ್ ಗಳಿವೆ. ಇವೆಲ್ಲ ಮಕ್ಕಳ ಮೇಲೆ ತೀರಾ ಕೆಟ್ಟ ಪರಿಣಾಮ ಬೀರುತ್ತಿದೆ. ಬ್ಲ್ಯೂವೇಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಗೇಮ್. ಇದು ಟೈಂಪಾಸ್‍ಗೆ ಆಡಿ ಸುಮ್ನಿರುವಂಥ ಗೇಮ್ ಅಲ್ಲ.ನಿರ್ವಾಹಕರ ಆದೇಶದಂತೆ ಆಡುವಂತಾ ಆಟ.
ಸೂಚಿಸಿದ ಟಾಸ್ಕ್ ‍ಗಳನ್ನು ಅನುಸರಿಸಬೇಕು. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತೆ. ಮಾನಸಿಕವಾಗಿ ದುರ್ಬಲವಾಗಿರುವ ಮಕ್ಕಳನ್ನೇ  ಈ ಗೇಮ್ ನತ್ತ ಸೆಳೆಯಲಾಗುತ್ತೆ.

ಇದರಲ್ಲಿ ಹಾರರ್ ಸಿನಿಮಾ ನೋಡುವುದು, ಮಧ್ಯರಾತ್ರಿ ಎದ್ದು ನಡೆದಾಡುವುದು, ಹೇಳಿದ ಕಡೆ ಹೋಗುವುದು ಹೀಗೆ ದಿನಕ್ಕೊಂದು ಟಾಸ್ಕ್ ಇರುತ್ತೆ. ಆಟದ ಪ್ರತಿಯೊಂದು ಹಂತದ ವೀಡಿಯೋವನ್ನು ಸಹ ಕಳುಹಿಸಬೇಕು. ಒಂದ್ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತೆ.




 ಈ ಚಿತ್ರ-ವಿಚಿತ್ರ ಟಾಸ್ಕ್ ಪೂರೈಸಿದ ಮೇಲೆ 50ನೇ ದಿನ ಸೆಲ್ಫ್ ಡಿಸ್ಟ್ರಾಯಿಂಗ್ ಹಂತ. ಅಂದರೆ ಆಟ ಆಡುತ್ತಿರುವವನು ಸೂಸೈಡ್ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡರೆ ಮಾತ್ರ ಆತ ಈ ಗೇಮ್‍ನಲ್ಲಿ ವಿನ್ ಆದಂತೆ. ಒಂದು ಸಲ ಈ ಆಟದೊಳಗೆ ಸೇರಿಕೊಂಡರೆ ಹೊರ ಬರುವುದಕ್ಕೆ ಆಗೋದಿಲ್ಲ..

2013ರಲ್ಲಿ ರಷ್ಯಾದಲ್ಲಿ ಈ ಆಟ ಆರಂಭವಾಯಿತು. ಮನೋವಿಜ್ಞಾನ ವಿದ್ಯಾರ್ಥಿ ಫಿಲಿಪ್ ಬುಡೆಕಿನ್ ಎಂಬಾತ ಈ ಆಟವನ್ನು ಸೃಷ್ಟಸಿದ್ದ. ಈ ಡೆಡ್ಲಿ ಗೇಮ್ ಮಕ್ಕಳ ಜೀವ ಬಲಿ ಪಡೆಯುತ್ತಿದೆ. ಮಕ್ಕಳು ಗೇಮ್‍ ಅನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ತಮ್ಮ ಜೀವಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ.

ಈ ಭಯಾನಕ ಬ್ಲೂವೇಲ್ ಗೇಮ್ ನಿಂದಾಗಿ ಯುರೋಪ್ ಮತ್ತು ರಷ್ಯಾದಾದ್ಯಂತ ಈ ವರೆಗೂ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೆ ವಿಶ್ವದಾದ್ಯಂತ 250 ವಿದ್ಯಾರ್ಥಿಗಳು ಬ್ಲೂವೇಲ್ ಗೇಮ್ ಆಡಿ ಸಾವನ್ನಪ್ಪಿದ್ದಾರೆ. ಅನೇಕ ದೇಶಗಳಲ್ಲಿ ಈ ಗೇಮ್ ಮೇಲೆ ನಿಷೇಧ ಹೇರಲಾಗಿದೆ.

ಆದ್ರೀಗ ಭಾರತಕ್ಕೆ ಎಂಟ್ರಿ ಕೊಟ್ಟಿರು ಈ ಸೂಸೈಡ್ ಗೇಮ್, ಇತ್ತೀಚಿಗೆ ಮುಂಬೈನಲ್ಲಿ 14 ವರ್ಷದ ಒಬ್ಬ ಹುಡುಗ ಆತ್ಮಹತ್ಯೆ ಮಾಡಿಕೊಂಡ. ಈ ಡೆಡ್ಲಿ ಗೇಮ್ ಗೆ ಆದಷ್ಟು ಬೇಗ ಕಡಿವಾಣ ಹಾಕಬೇಕಿದೆ.. ಇಲ್ಲವಾದಲ್ಲಿ ಇನ್ನಷ್ಟು ಮಕ್ಕಳನ್ನು ಇದು ಬಲಿ ತೆಗೆದು ಕೊಳ್ಳುವುದರಲ್ಲಿ ಅನುಮಾನವೇ ಇಲ್ಲ..

Comments