ಥ್ಯಾಂಕ್ಸ್ ಗಿವಿಂಗ್ ಡೇ; ಧನ್ಯವಾದ ಹೇಳಲೆಂದೇ ಒಂದು ದಿನ..
ಥ್ಯಾಂಕ್ಸ್... ಪರರಿಂದ ಸಹಾಯ ಪಡೆದ ಮೇಲೆ ನಾವು ಹೇಳುವ ಪದವಿದು. ಇದೊಂದು ಸೌಜನ್ಯ ಸೂಚಕ ಪದ. ಯಾರಿಂದಲಾದರೂ ನಾವು ಸಹಾಯವನ್ನು ಪಡೆದಾಗ ಅದಕ್ಕೆ ಕೃತಜ್ಞತೆ ಸಲ್ಲಿಸುವುದು ಅನಾದಿ ಕಾಲದಿಂದಲೂ ಬೆಳೆದು ಬಂದಿರುವ ಸಂಪ್ರದಾಯ. ಈ ಸಂಪ್ರದಾಯಕ್ಕೀಗ ಆಧುನಿಕ ಟಚ್ ಕೂಡ ಕೊಡಲಾಗಿದೆ.
ಪ್ರತಿ ದಿನ ನಾವು ಒಂದಲ್ಲ ಒಂದು ದಿನವನ್ನ ಆಚರಿಸ್ತೀವಿ. ವುಮೆನ್ಸ್ ಡೇ, ಮೆನ್ಸ್ ಡೇ, ಚಿಲ್ಡ್ರೆನ್ಸ್ ಡೇ, ಫಾದರ್ಸ್ ಡೇ, ಹೀಗೆ ನಿತ್ಯ ನೂರೆಂಟು ದಿನಾಚರಣೆಗಳನ್ನ ಆಚರಿಸ್ತೀವಿ. ಒಮ್ಮೆ ಗೂಗಲ್ ಮಾಡಿದ್ರೆ ಯಾವತ್ತು ಯಾವ ದಿನ ಅಂತ ಗೂತ್ತಾಗುತ್ತೆ. ಈ ಸೆಲಬ್ರೇಷನ್ಸ್ ಗೆ ರೆಸ್ಟೇ ಇಲ್ಲ. ಇನ್ನು ಅಮೇರಿಕ ಅಂದ್ರೆ ಕೇಳ್ಬೇಕಾ.. ಈ ಥ್ಯಾಂಕ್ಸ್ ಹೇಳಲು ಕೂಡಾ ಒಂದು ದಿನವಿದೆ ಎಂಬುದು ನಿಮಗೆ ಗೊತ್ತೇ?
ಹೌದು.. ಪ್ರಸ್ತುತ ವರ್ಷ ನವೆಂಬರ್ 23ರಂದು ಥ್ಯಾಂಕ್ಸ್ ಗಿವಿಂಗ್ ಡೇ ಅಂತಾನೆ ಅಮೇರಿಕ ಪ್ರತಿ ವರ್ಷ ಆಚರಿಸುತ್ತಿದೆ. ಇದು ಅಮೇರಿಕ ಮಾತ್ರ ಅಲ್ಲ ಕೆನಡಾ ಸೇರಿದಂತೆ ಕೆಲ ಫಾರಿನ್ ದೇಶಗಳಲ್ಲೂ ಆಚರಿಸುತ್ತಿದೆ.ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೆ ಗುರುವಾರವನ್ನು ಥ್ಯಾಂಕ್ಸ್ ಗಿವಿಂಗ್ ಡೇ ಎಂದು ಆಚರಿಸಲಾಗುತ್ತದೆ.
ವಿದೇಶಿಯರಿಗೆ ಕ್ರಿಸ್‌ಮಸ್, ಹೊಸ ವರ್ಷದಂತೆ ಈ ದಿನವೂ ಒಂದು ದೊಡ್ಡ ಹಬ್ಬ. ಈ ದಿನವನ್ನು ಅಲ್ಲಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಜೆ ಘೋಷಿಸಲಾಗುತ್ತದೆ. ಈ ದಿನಾಚರಣೆ ಈಗ ಏಷಿಯಾ ರಾಷ್ಟ್ರಗಳಲ್ಲೂ ಆಚರಿಸುವ ಟ್ರೆಂಡ್ ಶುರುವಾಗಿದೆ. ಈ ದಿನವನ್ನು ಸುಮಾರು 1863 ಇಸವಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ಈ ದಿನಕ್ಕೆಂದೇ ವಿಶೇಷವಾದ ಮತ್ತು ಆಕರ್ಷಕವಾದ ಗ್ರೀಟಿಂಗ್ ಕಾರ್ಡ್‌ಗಳು ಬರುತ್ತಿವೆ.
ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್; ಇದು ಥ್ಯಾಂಕ್ಸ್ ಗಿವಿಂಗ್ ಡೇ ಎಫೆಕ್ಟ್..!
ಇಂದು ಅಮೇರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಲಾಗುತ್ತಿದೆ. ಸೋ, ಲಾಸ್ ಏಂಜಲೀಸ್ ನಲ್ಲಿ ನಿನ್ನೆ ಭಾರೀ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಇದು ಈಗಾಗ್ಲೇ ವಿಶ್ವಾದ್ಯಂತ ಸುದ್ದಿಯಾಗಿದೆ.
ಥ್ಯಾಂಕ್ಸ್ ಗಿವಿಂಗ್ ಡೇ ಸೆಲಬ್ರೇಶನ್ ದಿನದ ನಂತರ 3 ದಿನ ಅಮೇರಿಕಾದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಇಂದಿನಿಂದ 26ರ ವರೆಗೆ ಅಮೇರಿಕ ಜನತೆಗೆ ರಜೆ ಇರಲಿದೆ.
ಈ ದಿನ ಅಮೆರಿಕನ್ನರು ತಮ್ಮ ಸ್ನೇಹಿತರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಮಾತ್ರವಲ್ಲದೇ ಅವರೊಂದಿಗೆ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಾರೆ. ವೀಕೆಂಡ್ ನಲ್ಲಿ ಈ ಆಚರಣೆಬರುವ ಹಿನ್ನೆಲೆಯಲ್ಲಿ ವರ್ಷದ ನಾಲ್ಕು ದಿನ ಅವರು ತಮ್ಮ ಎಲ್ಲಾ ಕೆಲಸ-ಕಾರ್ಯಗಳನ್ನು ಬಿಟ್ಟು ಗೆಳೆಯರನ್ನು ಭೇಟಿಯಾಗೋಕೆ ಅಂತಾನೇ ತೆರಳುತ್ತಾರೆ. ಇದರಿಂದಾಗಿ ನಗರದಲ್ಲಿ ಭಾರೀ ಟ್ರಾಫಿಕ್ ಉಂಟಾಗುತ್ತದೆ. ರಾತ್ರಿ ಉಂಟಾದ ಟ್ರಾಫಿಕ್ ಜಾಮ್ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆಹಿಡಿದ್ದಾರೆ. ವಾಹನಗಳ ರೆಡ್‍ಲೈಟ್ ಮಾರ್ಗದುದ್ದಕ್ಕೂ ಝಗಮಗಿಸುತ್ತದೆ. ಈ ಫೋಟೋಗಳು ಈಗ ಎಲ್ಲಾ ಕಡೆ ವೈರಲ್ ಆಗಿದೆ.

ನೋಡಿ ಅಮೇರಿಕನ್ನರು ತಮ್ಮವರಿಗೆ ಥ್ಯಾಂಕ್ಸ್ ಹೇಳೋಕೆ ಎಷ್ಟು ಉತ್ಸುಕರಾಗಿರ್ತಾರೆ ಅಂತ. ಒಂದು ಥ್ಯಾಂಕ್ಸ್ ಗೆ ಎಲ್ಲಾ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಇದೆ ಅಂದರೆ ತಪ್ಪಾಗಲಾರದು. ನೀವು ಸಹ ಇವತ್ತು ನಿಮ್ಮವರಿಗೆ ಥ್ಯಾಂಕ್ಸ್ ಹೇಳಿ ಥ್ಯಾಂಕ್ಸ್ ಗಿವಿಂಗ್ ಡೇ ಅನ್ನು ಸೆಲಬ್ರೇಟ್ ಮಾಡಿ..
Comments
Post a Comment