ಕಾಲು ಸೋತ ಶಿಶು.. ಮೋದಿಯ ಮರೆತ ಭಾರತ!

ಕಾಲು ಸೋತ ಶಿಶು..
ಮೋದಿಯ ಮರೆತ ಭಾರತ!

.
ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬರುವವರು, ಬಂದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿದು ಬಿಡಬಹುದಾದ ಆತಂಕವನ್ನು ಸದಾ ಎದುರಿಸುತ್ತಲೇ ಇರಬೇಕಾಗುತ್ತದೆ. ಸಧ್ಯದ ಮಟ್ಟಿಗೆ ಭಾರತೀಯ ಜನತಾ ಪಕ್ಷದ ಸದಸ್ಯ, ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಈ ಭೀತಿ ಕಾಣಿಸಿಕೊಳ್ಳತೊಡಗಿದೆ. ವಾಸ್ತವದ react ಗೆ ಅತ್ಯಂತ ವೇಗವಾಗಿ ಮತ್ತು ಬಹಳ ನಾಜೂಕಾಗಿ ಸ್ಪಂಧಿಸುವವರು ಬಿಜೆಪಿಗರು. ಅದೊಂದು ವ್ಯವಸ್ಥಿತ ಷಡ್ಯಂತ್ರದಂತೆ. ಕಾಲಕ್ಕೆ ಪ್ರತಿಯಾಗಿ ವ್ಯವಸ್ಥಿತ ರೀತಿಯಲ್ಲಿ ದಾಳಿಗೈಯುವುದು ಮತ್ತು ದಾಳ ಉರುಳಿಸುವುದು ಆ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡವರ ತಾಕತ್ತು. ನೀಳವಾಗಿ ತೀಡಿಕೊಂಡರೆ ಗಡ್ಡ, ಮಡಚಿ ಮಡುಗಟ್ಟಿದರೆ ಜಡೆ..! ಹೀಗೆ.. ಹೇಗೆ ಬೇಕೋ ಹಾಗೆ; ವಸ್ತುಸ್ಥಿತಿಯನ್ನು ಬದಲಿಸಿಬಿಡಬಲ್ಲ ನಿಪುಣರು. ಮಣಿಶಂಕರ್ ಅಯ್ಯರ್, 'ಚಾ' ಮಾರುವವರೆಲ್ಲಾ ದೇಶದ ಪ್ರಧಾನಿಯಾಗಲಾರರು ಎಂಬರ್ಥದ ಹೇಳಿಕೆಯನ್ನೇನಾದರೂ ನೀಡದೇ ಇರುತ್ತಿದ್ದರೆ ಮೋದಿಯ ಹಿನ್ನೆಲೆಯನ್ನು ಆಳವಾಗಿ ಯಾರೂ ಕೆದಕುತ್ತಿರಲಿಲ್ಲ. ಅದಕ್ಕೂ ಹೆಚ್ಚು ಸೂಚ್ಯ ವ್ಯಾಖ್ಯಾನವೆಂದೆರೆ ಮೋದಿಯನ್ನು ವಿರೋಧಿಸಲು ಸಕಾರಣವಿದ್ದ, 'ಭಯಂಕರ', 'ನರಮೇಧ'ದ ಪೂರ್ವಾಪರವನ್ನೇ ಅಖೈರು ಎಂದು ತೀರ್ಮಾನಿಸಿಬಿಡುತ್ತಿದ್ದರು ಮತ್ತು  ಬಿಜೆಪಿಗರು ಅದನ್ನೇ ಅಸ್ತ್ರವನ್ನಾಗಿ ಬಳಸುತ್ತಿದ್ದರು. ನೆನಪಿರಲಿ, ಹಿಂದಿನ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದು 'ಅಭಿವೃದ್ಧಿ'ಯ ಮಾನದಂಡದ ಮೇಲೆಯೇ ಹೊರತು ಎಲ್ಲಿಯೂ 'ಹಿಂದೂ' ಟ್ರಂಪ್ ಕಾರ್ಡ್ ಮಾನದಂಡವಾಗಲೇ ಇಲ್ಲ. ಬಳಸಬಹುದಾದ ಸಾಧ್ಯತೆ ಮತ್ತು ಬಳಸಿ ಗೆಲ್ಲಬಹುದಾದ ಸಾಧ್ಯತೆಗಳಿದ್ದಾಗಲೂ 'ಗುಜರಾತ್ ಮಾಡೆಲ್' ಮತ್ತು 'ಅಭಿವೃದ್ಧಿ' ಮಾನದಂಡದ ಮೇಲಷ್ಟೇ ಚುನಾವಣೆ ಎದುರಿಸಿ ಹೆಚ್ಚು ಯಶಸ್ವಿಯಾದರು. ಇದು 
ಎಷ್ಟರ ಮಟ್ಟಿಗೆ workout ಆಯಿತೆಂದರೆ, ಬಿಜೆಪಿಗರ ನಿರೀಕ್ಷೆಯೂ ಮೀರಿ ಮೋದಿ ಗೆದ್ದು ಬಂದರು. ಅಷ್ಟೇ ಯಾಕೆ? ಮೋದಿ ನೋಟ್ ಬ್ಯಾನ್ ಎಂಬ ಗುಬ್ಬಿ ಮೇಲಿನ ಬ್ರಹ್ಮಾಸ್ತ್ರ ಪ್ರಯೋಗವನ್ನೂ ಜನತೆ ಉಸಿರು ಬಿಗಿ ಹಿಡಿದು ಸ್ವೀಕರಿಸಲು ಕಾರಣ ಅಭಿವೃದ್ಧಿ! ಸಧ್ಯ ವಸ್ತುಸ್ಥಿತಿ ಅರಿವಾಗುತ್ತಿದ್ದಂತೆ, ಬೂಟಾಟಿಕೆ ಮೆದುಳುಗಳು ಹೆಚ್ಚು ಕ್ರಿಯಾಶೀಲವಾಗತೊಡಗಿವೆ. ಅವರುಗಳ ಮೌನ ಹೆಚ್ಚು ಅರ್ಥಗರ್ಬಿತ ಮತ್ತು ಆ ಭೀತಿ ಸಧ್ಯ ಮೋದಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. 



ಹೀಗೇ ಬಿಜೆಪಿಯಲ್ಲಿ ನೇಪಥ್ಯಕ್ಕೆ ಸರಿದರೆ ಮೋದಿಯೇನು ಮೊದಲಿಗರಾಗಲಾರರು. ಸಾಲು ಸಾಲು ನಾಯಕರ ದಂಡೇ ಇಂದು ಬಿಜೆಪಿಯಿಂದ ಮಾಸಿ ಹೋಗಿವೆ. ಪಕ್ಷಕ್ಕಾಗಿ ದಕ್ಕಿಸಿಕೊಂಡಿದ್ದ ಅಥವಾ ಬಲವಂತವಾಗಿ ಹೇರಿಕೊಂಡಿದ್ದ ಸಿದ್ಧಾಂತಗಳಿಂದು ಹಾಗೆ ಮಾಸಿ ಹೋದ ದುರಂತ ನಾಯಕರ ರಾಜಕೀಯ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟಿರುವುದು ಸುಳ್ಳಲ್ಲ. ಲಾಲ್ ಕೃಷ್ಣ ಅಡ್ವಾಣಿ ಜೀವಂತ ಉದಾಹರಣೆ. ಅಡ್ವಾಣಿಯ ರಥಯಾತ್ರೆಯ ಗಾಲಿ ಮಗುಚಿಕೊಂಡಿದ್ದರೂ ಬಿಜೆಪಿ ಈ ಪರಿಯ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಸಧ್ಯ ಬಿಜೆಪಿಯ ರಾಷ್ಟ್ರ ನಾಯಕರ ಪಟ್ಟಿಯನ್ನೇನಾದರೂ ತಡಕಿದರೆ ಅಲ್ಲಿ ಮೋದಿ ಮತ್ತು ಅಮಿತ್ ಶಾ ಹೊರತು ಬೇರೆ ಹೆಸರುಗಳು ಸಿಗಲಾರವು. ಹಾಗೆಂದು ಇತರೆ ನಾಯಕರುಗಳು ಬಿಜೆಪಿಯಲ್ಲಿಲ್ಲವೆಂದಲ್ಲ. ಹೇಳಹೆಸರಿಲ್ಲದಂತೆ. Tsunami ಯಲ್ಲಿ sielent ಆಗಿ ಸೇರಿಕೊಂಡ T ಯ ಹಾಗೆ. ಅದು ಹೆಚ್ತು ಸದ್ದು ಮಾಡುವುದಿಲ್ಲ. ಆದರೆ, ಅಕಸ್ಮಾತ್ T ಇಲ್ಲದಿದ್ದಲ್ಲಿ ಹೆಸರೇ ಪರಿಪೂರ್ಣವಾಗಲಾರದು ಎಂಬ ಸತ್ಯದ ಅರಿವಿದ್ದಾಗಲೂ ಬಿಜೆಪಿ ಲಗಾಮು ಬಿಗಿದಿರುವುದು ವ್ಯಕ್ತಿಯೋರ್ವನ ಮೇಲೆ. but ಓಡುವ ಕುದುರೆಯ ಲಗಾಮು ಕುದರೆಯ ಮೂಗಿಗೆ ಸುರಿದ ದಾರದಲ್ಲಿದೆ.









ಕೆಲವೇ ವರ್ಷಗಳ ಹಿಂದೆ ಬಿಜೆಪಿ ಎಂದರೆ ಅಲ್ಲಿ ರಾಷ್ಠ್ರ ನಾಯಕರ ಪಟ್ಟಿಯೇ ರಾರಾಜಿಸುತ್ತಿತ್ತು. ಕ್ಷಮಿಸಿ ಹೆಸರುಗಳಲ್ಲ ಪಟ್ಟಿ. ರಾಷ್ಟ್ರೀಯ ಸ್ವಯಂ ಸೇವಕಸಂಘದ ರಾಜಕೀಯ ಭಾಗವಾಗಿ ಕಡೆಯಲಾದ ಜನಸಂಘಕ್ಕೆ ಇದು ಶೋಭೆಯಲ್ಲ. ಆರ್.ಎಸ್.ಎಸ್ ವಿರುದ್ಧ ಎಂತಹಾ ಟೀಕೆಗಳಿದ್ದಾಗ್ಯೂ ಅತ್ಯಂತ ಶಿಸ್ತಿನ ಮತ್ತು ಅತಿ ಹೆಚ್ಚು ಕಾರ್ಯಕರ್ತರನ್ನು ಒಳಗೊಂಡ ಸಂಘಟನೆ ಎಂಬ ಸತ್ಯಕ್ಕೆ  ಅಪವಾದದಂತಿದೆ ಸದ್ಯದ ಬಿಜೆಪಿ ನಡೆ. ಒಮ್ಮೆ ಕಣ್ಣಾಡಿಸಿ ನೋಡಿ, ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಜನಾ ಕೃಷ್ಣಮೂರ್ತಿ, ಬಂಗಾರು ಲಕ್ಷ್ಮಣ್, ಕುಶಾಭಾವ್ ಠಾಕ್ರೆ, ಮುರಳಿ ಮನೋಹರ ಜೋಷಿ, ಸುಶ್ಮ ಸ್ವರಾಜ್ ಹೀಗೆ ಈ ಪಟ್ಟಿಯಲ್ಲಿ ಮಾಸಿ ಹೋದ ಹೆಸರುಗಳು ಗೋಚರಿಸತೊಡಗುತ್ತವೆ. ಮುಂದೆ ಮೋದಿ ಮತ್ತು ಅಮಿತ್ ಶಾ.. ಹಾಗೆ ದುರಂತ ಕಥಾನಾಯಕನ ಪಟ್ಟಕ್ಕೆ ಅಣಿಯಾಗಲಿರುವ ಹೆಸರುಗಳೂ ಸಧ್ಯ ಹೆಚ್ಚು ಸದ್ದು ಮಾಡುತ್ತಿವೆ.


ಭಾರತೀಯ ಜನತಾ ಪಾರ್ಟಿ ಕೇವಲ ಬಿಜೆಪಿಗಷ್ಟೇ ಹೊಸ ಮುಖಗಳನ್ನು ಪರಿಚಯಿಸಲಿಲ್ಲ. ಬಿಜೆಪಿ ಸ್ಥಾಪಿಸುವ ವ್ಯಕ್ತಿಗೆ ವಿರುದ್ಧವಾಗಿ ನಿಂತುಕೊಂಡವರಲ್ಲೂ ಕೆಲವು ಹೀರೋಗಳು ಹುಟ್ಟಿಕೊಂಡರು. ಅವರೂ ಸಹ ಬಂದಷ್ಟೇ ವೇಗವಾಗಿ ಮರೆಯಾದರು. ಆ ದಿಸೆಯಲ್ಲಿ ಕೆಲವು ಹೆಸರುಗಳು ಕಾಣಿಸಿಕೊಳ್ಳುತ್ತವೆ. ಇನ್ನು ಭವಿಷ್ಯದ ಬಿಜೆಪಿ ನಾಯಕರಂತೆ ಕೆಲವು ವ್ಯಕ್ತಿಗಳು ಕಾಣಸಿಗುತ್ತಾರೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್, ರಾದಸ್ಥಾನದ ಗ್ಯಾನ್ ದೇವ್ ಅಹುಜಾ ಹೀಗೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಮುಖವಾಣಿಯಾಗಿ 1980ರಲ್ಲಿ ಕಾರ್ಯಾರಂಭ ಮಾಡಿದ ಭಾರತೀಯ ಜನತಾ ಪಾರ್ಟಿಗೆ 'ಹಿಂದೂ' ಎಂಬ ನಾಮವೊಂದು ಬಲ.. ಆ ಸತ್ಯವನ್ನು ಪದೇ ಪದೇ ಸಾಬೀತುಪಡಿಸುತ್ತಲೇ ಬಂದಿದೆ ಮತ್ತು ಆ ಸತ್ಯವನ್ನು ಅದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತದೆ. ಬೆರಳೆಣಿಕೆಯಷ್ಟು ಉಗ್ರರ ಅಟ್ಟಹಾಸಕ್ಕೆ ದೇಶವೇಕೆ? ಜಗತ್ತೇ ಹೊತ್ತಿ ಉರಿಯುವ ಹೊತ್ತಿಗೆ ಗಳ ಹಿರಿಯತೊಡಗಿದ್ದು ಬಿಜೆಪಿಗರ ಗೇಮ್ ಪಾಲಿಟಿಕ್ಸ್ ಅಷ್ಟೇ ಅಲ್ಲ 'ಹಿಂದೂ' ಎಂಬ ಅಂಕಿತವನ್ನೇ ನೆಚ್ಚಿಕೊಂಡ ಜನರಿಗೆ ಬಿಜೆಪಿ ಅನಿವಾರ್ಯ ಎಂಬ ವಾದವನ್ನು ದದು ಸಲೀಸಾಗಿ ಮುಂದಿಟ್ಟು ಬಿಡುತ್ತದೆ. ಆಂತರಿಕ ಸಮಸ್ಯೆಗಳತ್ತ ಶೂನ್ಯ ಧೃಷ್ಠಿ ಬೀರುವ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಮೇಳೈಸಿಬಿಟ್ಟಿದೆ. ಅಂತಹ ವ್ಯವಸ್ಥಿತ ಹುನ್ನಾರದ ಭಾಗವಾಗಿ ಮೋದಿ, ಅಮಿತ್ ಶಾರಂತಹ ಮುಖಗಳು ಬೆಳಕಿಗೆ ಬರುತ್ತವೆ. ನೆನಪಿರಲಿ, ಸಮತಾ ಸಮಾಜಕ್ಕೆ ಧರ್ಮಾದಾರಿತ ರಾಜಕೀಯದಿಂದ ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಸಿದ್ಧಿಸಿದಷ್ಟು ಯಶ ಸಾಧಿಸಲು ಸಾಧ್ಯವಿಲ್ಲ. ಆದರೆ, ಹಿಂದಿನ ಅಭಿವೃದ್ಧಿ ಮಾನದಂಡದ ಮೇಲೆ ಬಿಜೆಪಿ ಮುಂದಿನ ಎಲೆಕ್ಷನ್ ಎದುರಿಸಲು ಬಿಲ್ ಕುಲ್ ಸಾಧ್ಯವಿಲ್ಲ. ಹಾಗೊಂದು ವೇಳೆ ಚುನಾವಣೆ ಎದುರಿಸಿದ್ದೇ ಆದಲ್ಲಿ ಬಿಜೆಪಿ ಪತನದಂಚಿಗೆ ಸರಿಯುವುದರಲ್ಲಿ ಅನುಮಾನವೂ ಇಲ್ಲ. ಅದಕ್ಕೆ ಪೂರ್ವ ತಯಾರಿ ಎಂಬಂತೆ ಯೋಗಿ ಆದಿತ್ಯನಾಥ್ ಗೆ ಹೆಚ್ಚು ಮಣೆ ಹಾಕಲಾಗುತ್ತಿದೆ ಮತ್ತು ಮೋದಿ ನೇಪಥ್ಯಕ್ಕೆ ಸರಿಯಲಾರಂಭಿಸಿದ್ದಾರೆ. ಸಧ್ಯ ಮೋದಿ ಜಾಗವನ್ನು ಹಂತ ಹಂತವಾಗಿ ಯೋಗಿ ಆವರಿಸಿಕೊಳ್ಳತೊಡಗಿದ್ದಾರೆ. ಅಲ್ಲಿಗೆ ಬಿಜೆಪಿಯ ಮತ್ತೊಂದು ಪ್ಲಸ್ ಒಂದು ವಿಕೆಟ್ ಪತನಗೊಂಡಂತೆಯೇ..

                                                                                                             - ರಿಯಾಜ್ ಕಾಚ್​​ಗಲ್







Comments