ಸೇರಿಗೆ ಸವಾ ಸೇರು..!


“C’.‘D” ರಾಜಕಾರಣ; ತಾಕತ್ತಿದ್ದರೆ ಕ್ಯಾಸೆಟ್ ಬಿಡುಗಡೆ ಮಾಡಿ ನೋಡೋಣ..!
ಬಾಲಕೃಷ್ಣ, ನಿಖಿಲ್ ನಡುವೆ ಸಿಡಿ ವಾರ್..!

ವಿಧಾನಸಭೆ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇದೆ.. ರಂಗೇರಿದ ಚುನಾವಣಾ ಕಣದಲ್ಲಿ ಸಿಡಿ ರಾಜಕಾರಣ ತಲೆ ಎತ್ತಿದೆ. ಹೆಚ್.ಸಿ.ಬಾಲಕೃಷ್ಣ, ನಿಖಿಲ್ ಕುಮಾರಸ್ವಾಮಿ ನಡುವೆ ನಿನ್ನೆ ಸಿಡಿ ವಾರ್ ಶುರುವಾಗಿದೆ. ಚುನಾವಣಾ ಅಖಾಡದಲ್ಲಿ ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅಬ್ಬರದ ಮಾತನಾಡುವ ವೇಳೆ ನಿಖಿಲ್ ಕುಮಾರಸ್ವಾಮಿಯ ಬೇಜಾನ್ ಸಿಡಿಗಳು ನನ್ನ ಬಳಿಯಿವೆ ಎಂದು ಮಾತೊಂದನ್ನು ತೇಲಿ ಬಿಟ್ಟಿದ್ದಾರೆ..

 ಈದೀಗ ಬಾಲಕೃಷ್ಣ ಮಾತಿಗೆ ನಿಖಿಲ್ ಕೂಡಾ ಖಡಕ್ಕಾಗೆ ಸವಾಲ್ ಹಾಕಿದ್ದಾರೆ. ಇತ್ತ, ಮಗನ ಪರ ಹೆಚ್.ಡಿ.ಕೆ ಕೂಡ ಏರು ಧ್ವನಿಯಲ್ಲೇ ತಾಕತ್ತಿದ್ರೆ ಸಿಡಿ ಬಿಡುಗಡೆ ಮಾಡ್ಲಿ ನೋಡ್ತೀನಿ ಅಂತ ಸವಾಲಾಕಿದ್ದಾರೆ. ಬಾಲಕೃಷ್ಣ, ನಿಖಿಲ್ ಇಬ್ಬರೂ ಏಟಿಗೆ ಎದಿರೇಟು ನೀಡಿದ್ದಾರೆ.

ಜೆಡಿಎಸ್ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್ ಸ್ಟಾರ್ ಪ್ರಚಾರಕರಾಗಿ ನಿಖಿಲ್ ಕುಮಾರಸ್ವಾಮಿ ಮತಯಾಚನೆ ಮಾಡುತ್ತಿದ್ದಾರೆ. ಬೇಸಿಗೆ ಬಿರು ಬಿಸಿಲಿನಲ್ಲಿ ಮತಯಾಚಿಸುವ ಭರದಲ್ಲಿ ಇಬ್ಬರ ನಡುವೆ ಹೊಸ ಸಮರಕ್ತೆ ನಾಂದಿ ಹಾಡಿದ್ದಾರೆ.

ತುಮಕೂರಿನಲ್ಲಿ ಪ್ರಚಾರ ನಡೆಸುವಾಗ ಜೆಡಿಎಸ್ ಪಕ್ಷದಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ ಶಾಸಕರ ವಿರುದ್ದ ನಿಖಿಲ್ ವಾಗ್ಧಾಳಿ ನಡೆಸಿದ್ದರು.. ‘ಅವರೆಲ್ಲಾ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ’ ಎಂದು ಕಿಡಿಕಾರಿದ್ದರು. ಇದಕ್ಕೆ ಮಾಗಡಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಾಲಕೃಷ್ಣ ಸಿಡಿಮಿಡಿಯಾಗೇ ತಿರುಗೇಟು ನೀಡಿದರು. 'ಬಂದವರು ವೋಟ್ ಕೇಳೋದು ಬಿಟ್ಟು ನಮ್ಮ ಬಗ್ಗೆ ಮಾತನಾಡಿದರೆ, ನಮ್ಮತ್ರನೂ ನಿಖಿಲ್ ನ ಬೇಜಾನ್ ಸಿಡಿಗಳಿವೆ' ಎಂದು ಬಾಂಬ್ ಸಿಡಿಸೇ ಬಿಟ್ಟರು. ಬಾಲಕೃಷ್ಣ ಚಾಟಿ ಏಟಿಗೆ ನಿಖಿಲ್ 'ತಾಕತ್ ಇದ್ರೆ ಕ್ಯಾಸೆಟ್ ಬಿಡುಗಡೆ ಮಾಡಲಿ. ಅವರ ಯೋಗ್ಯತೆ ಏನು ಎಂದು ಆರುವರೆ ಕೋಟಿ ಕನ್ನಡಿಗರು ನೋಡಿದ್ದಾರೆ. ಹೇಗೆ ಬೆನ್ನಿಗೆ ಚೂರಿ ಚುಚ್ಚಿ ಹೋಗಿದ್ದಾರೆ ಎಂದು. ಮಾಗಡಿ ಬಾಲಕೃಷ್ಣ ಅವರು ಈ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಹೊಂದಬೇಕು. ನೋಡೋಣ ಅದು ಹೇಗೆ ರಾಜಕೀಯ ಮಾಡುತ್ತಾರೆ' ಎಂದು ಇತ್ತಲಿಂದ ಚಾಟಿ ಬೀಸೇ ಬಿಟ್ಟರು.


ಇವರಿಬ್ಬರ ಕ್ಯಾಸೆಟ್ ಯುದ್ಧ ಶುರುವಾಗುತ್ತಲೇ ಮಂಡ್ಯದಲ್ಲಿ ಪುತ್ರನ ಪರ ಕುಮಾರಸ್ವಾಮಿ, ‘ನಿಖಿಲ್ ಬಗ್ಗೆ ಸಾಕ್ಷ್ಯ ಇದ್ದರೆ ಸಿಡಿ ಬಿಡುಗಡೆ ಮಾಡಲಿ’ ಅಂತ ಬಾಲಕೃಷ್ಮರಿಗೆ ಬಹಿರಂಗ ಸವಾಲ್ ಹಾಕಿದರು. ಅತ್ತ ಮಾಜಿ ಸಿಎಂ ಧ್ವನಿ ಕೇಳುತ್ತಲೇ, ಇತ್ತ ಬಾಲಕೃಷ್ಣ ‘ನಾನು ಹಾಗೆ ಹೇಳೇ ಇಲ್ಲ. ನಿಖಿಲ್ ಜಾತಕದ ಬಗ್ಗೆ ಮಾತಾಡೇ ಇಲ್ಲ’ ಅಂತ ಬಾಲಕೃಷ್ಣ ಯೂಟರ್ನ್ ಹೊಡೆದರು.

ರಾಜಕೀಯದ ಚದುರಂಗದಾಟದಲ್ಲಿ ನಿಖಿಲ್, ಹೆಚ್.ಡಿ.ಕೆ, ಬಾಲಕೃಷ್ಣ ನಡುವೆ ಕ್ಯಾಸೆಟ್ ಸಮರ ಶುರುವಾಗಿದೆ. ಚುನಾವಣೆ ಮುಗಿಯುವುದರೊಳಗೆ ಇದಿನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Comments