ದಾರಿ ಮರೆಸಿದ ಬಂಧ..

ಗುಂಪು ಗದ್ದಲದಲ್ಲೂ ಒಂಟಿಯಾದಂತೆ ನೀವಿಲ್ಲದೆ..!!

ಸರಿಸುಮಾರು 12 ವರ್ಷಗಳ ಹಿಂದೆ, ಇದೇ ವಿಧಾನಸೌಧದ ಎದುರು ಎಣಿಸಲಾರದಷ್ಟು ಬಾರಿ ಓಡಾಡಿದ್ದೇನೆ.. ಆಗೆಲ್ಲಾ ಅದೇನೋ ಖುಷಿ, ಹೆಮ್ಮೆ, ಹುಮ್ಮಸ್ಸು ನನ್ನಲ್ಲಿ ಕಾಣುತ್ತಿದ್ದವು.. ಹಗಲು-ರಾತ್ರಿಗಳ ಪರಿವಿಲ್ಲದೆ ನಡೆದಾಡಿದ ದಾರಿ ಇದು. ಮಳೆ-ಬಿಸಿಲಲ್ಲಿ ಒದ್ದಾಡಿಕೊಂಡು, ಕಾಲು ನೋಯಿಸಿಕೊಂಡು ನಡೆಯುತ್ತಿದ್ದ ಆತ್ಮೀಯ ದಾರಿ ಇದು.

ಆದ್ರೆ ಕಳೆದೆರಡು ವರ್ಷಗಳಲ್ಲಿ ಇವತ್ತು ಮತ್ತದೇ ವಿಧಾನಸೌಧದ ಎದುರು ನಡೆದು ಬರುವಾಗ ನಿತ್ಯ ಓಡಾಡುವ ಮಾಮೂಲಿ ರಸ್ತೆಗಳ ಫುಟ್‘ಪಾತ್'ನಂತೆ ಭಾಸವಾಯ್ತು.. ಉರಿ ಬಿಸಿಲು ನನ್ನ ಮೈ ಸುಡುತ್ತಿತ್ತು.. ದಾರಿಯುದ್ದಕ್ಕೂ ನಿಶ್ಯಬದ್ಧವೇ ಮನೆಮಾಡಿತ್ತು.. ಯಾಕೀಗೆ ಅನಿಸುತ್ತಿದೆ ಅಂತ ಯೋಚಿಸಿದಾಗ ನನಗರಿವಿಲ್ಲದೆ, ನನ್ನ ಕಣ್ಣಾಲಿಗಳು ಒದ್ದೆಯಾದವು. ಅರೆ ಇದೇನಾಯ್ತು ನನಗೆ ಅಂತ ಒಂದು ನಿಮಿಷ ದಂಗಾದೆ.. ಆಗ್ಲೇ ನೆನಪಾಗಿದ್ದು, ಪಪ್ಪಾ...

ಎಸ್.. ಈ ಅಪರಿಚಿತ ಭಾವನೆಗೆ ಕಾರಣ ನನ್ನಪ್ಪ.. ಹೌದು.. ಮೊದಲು ಈ ರಸ್ತೆಯಲ್ಲಿ, ವಿಧಾನಸೌಧದ ಕಾರಿಡಾರ್'ನಲ್ಲಿ ಓಡಾಡುವಾಗ ಜೊತೆಗೆ ಪಪ್ಪಾ ಇರುತ್ತಿದ್ದರು, ಇಲ್ಲವೇ ಅವರ ಭೇಟಿಗಾಗಿ ಬರುತ್ತಿದ್ದೆ.. ಹಾಗಾಗಿಯೇ ವಿಧಾನಸೌಧ, ಜಿಪಿಓ, ಪ್ರೆಸ್'ಕ್ಲಬ್, ಆಕಾಶವಾಣಿ, ರಾಜಭವನದ ನಂಟು ನನಗಿದ್ದದ್ದು.. ಬಟ್............, ಇವತ್ತು ಅವರಿಲ್ಲ.. ಸೋ, ಈ ದಾರಿ ನನಗೆ ಅಪರಿಚಿತವೇ ಸರಿ.. ತತ್'ಕ್ಷಣವೇ ನನ್ನ ಕಣ್ಣುಗಳು ಯೂ-ಟರ್ನ್ ತೆಗೆದುಕೊಳ್ಳುತ್ತಿದ್ದ ಆಟೋಗಳಲ್ಲಿ ನನ್ನನ್ನೇ ನೋಡುತ್ತಿದ್ದವು.. ರಾಯಲ್ ಎನ್ಫೀಲ್ಡ್ ಬೈಕ್ ಹಿಂದೆ, ನನ್ನೆದುರೇ ಸಾಗಿದ ಎಂಎಲ್ಎ ಸರ್ಕಾರಿ ಕಾರಿನಲ್ಲೂ ನಾನಿದ್ದೆ.. ನನ್ನ ಜೊತೆ ಪಪ್ಪಾ ಕೂಡ ಇದ್ರೂ... ಮಿಸ್ ಯೂ ಸಂಜು😔.. ಈ ಪರಿಚಿತ ದಾರಿ ಅಪರಿಚಿತವಾಗೋಕೆ ನೀವೇ ಕಾರಣಕಾರರು ಪಪ್ಪಾ..

 'ಅಪ್ಪ ನಿನ್ನವಳೇ ನಾ' ಎಂದ ಮೇಲೂ ಯಾಕಪ್ಪ ಬಿಟ್ಚು ಹೋಗಿದ್ದು..?? ಈ ದಾರಿಯಲ್ಲಿ ಒಂದಲ್ಲ ಒಂದು ದಿನ ಒಂಟಿ ಆಗ್ತೀನಿ ಅಂತ ಗೊತ್ತಿದ್ರೂ, ಯಾಕೆ ನೀವೋಬ್ಬರೇ, ನಾ ಕಾಣದ ಲೋಕಕ್ಕೆ ಹೋಗಿದ್ದು..??

Comments

  1. “No other love in the world is like the love of a father has for his little girl.” day by day week ends,week by week month ends, month by month year ends,but love for dad never ends nicely penned athige keep writing 🙏🙏🙏🙏

    ReplyDelete
    Replies
    1. Thankyew ನವೀನ.
      Writing stop ಮಾಡೋ ಚಾನ್ಸೇ ಇಲ್ಲ..

      Delete

Post a Comment